ಪತ್ತನಂತಿಟ್ಟ: ಶಬರಿಮಲೆ ದ್ವಾರಪಾಲಕ ಶಿಲ್ಪಗಳ ಚಿನ್ನದ ಲೇಪನವನ್ನು ಚೆನ್ನೈನ ಕಂಪನಿಯಿಂದ ಸನ್ನಿಧಾನಕ್ಕೆ ಹಿಂತಿರುಗಿಸಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದು ಅದನ್ನು ಮತ್ತೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ, ಚಿನ್ನದ ಲೇಪನವನ್ನು ಸ್ಟ್ರಾಂಗ್ ರೂಮಿನಲ್ಲಿರಿಸಲಾಗುುತ್ತದೆ. ನ್ಯಾಯಾಲಯದ ಅನುಮತಿಯಿಲ್ಲದೆ ಚಿನ್ನದ ಲೇಪನವನ್ನು ದುರಸ್ತಿಗಾಗಿ ಚೆನ್ನೈಗೆ ತೆಗೆದುಕೊಂಡು ಹೋಗಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ನ್ಯಾಯಾಲಯದ ಅನುಮತಿಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತಂತ್ರಿಗಳ ಸೂಚನೆ ಪ್ರಕಾರ, ಚಿನ್ನದ ಲೇಪನವಿರುವ ಮೂರ್ತಿಗಳನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆಗಳೊಂದಿಗೆ ಸನ್ನಿಧಾನದಲ್ಲಿ ಇರಿಸಲಾಗುತ್ತದೆ. ದುರಸ್ತಿಗಾಗಿ ತೆಗೆದುಕೊಂಡ ಒಂದು ತಿಂಗಳ ನಂತರ ಚಿನ್ನದ ಲೇಪನದ ಮೂರ್ತಿಯನ್ನು ಮತ್ತೆ ಸನ್ನಿಧಾನಕ್ಕೆ ತರಲಾಗಿದೆ.
ಗರ್ಭಗುಡಿಯಲ್ಲಿ ಚಿನ್ನದ ಕೆಲಸಗಳನ್ನು ಹೈಕೋರ್ಟ್‍ನ ಅನುಮತಿಯೊಂದಿಗೆ ಮಾತ್ರ ಮಾಡಬೇಕು ಎಂಬ ನಿರ್ದೇಶನವನ್ನು ಪಾಲಿಸದಿರುವುದು ಗಂಭೀರ ಲೋಪ ಎಂಬ ಆರೋಪವಿತ್ತು. ಶಬರಿಮಲೆ ದ್ವಾರಪಾಲಕ ಶಿಲ್ಪಗಳ ಮೇಲಿನ ಚಿನ್ನದ ಲೇಪನವನ್ನು ನಿರ್ವಹಣೆಗಾಗಿ ಕೊಂಡೊಯ್ಯಲಾಗಿತ್ತು. ಕಾರ್ಯವಿಧಾನಗಳಲ್ಲಿ ಯಾವುದೇ ದೋಷಗಳಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದರು.




