HEALTH TIPS

ಕಾಞಂಗಾಡಿನಲ್ಲಿ ಸರಣಿ ಅಪಘಾತ-ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿಯಾದ ಕಾರಿಗೆ ಬೆಂಕಿ

ಕಾಸರಗೋಡು: ಕಾಞಂಗಾಡು ಟಿ.ಬಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ಇತರ ಎರಡು ಕಾರುಗಳಿಗೆ ಹಾಗೂ ಸನಿಹದ ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿಯಾಗಿ ನಿಂತಿದ್ದು, ಈ ಸಂದರ್ಭ ಇನ್ನೊಂದು ಕಾರಿಗೆ ಬೆಂಕಿ ಹತ್ತಿಕೊಂಡಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ವಾಪಸಾಗುತ್ತಿದ್ದ ಹೊಸ ಕಾರು ಭಾನುವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ. ಕಾರು ರಸ್ತೆ ಬದಿ ನಿಂತಿದ್ದ ಡ್ರೈವಿಂಗ್ ಶಾಲೆಯ ಕಾರು ಹಾಗೂ ಇದರ ಸನಿಹ ನಿಂತಿದ್ದ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಈ ಸಂದರ್ಭ ಡ್ರೈವಿಂಗ್ ಶಾಲೆಯ ಕಾರು ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿಯಾದ ಪರಿಣಾಮ ವಿದ್ಯುತ್ ತಂತಿ ಕಡಿದು ಬಿದ್ದು, ಬೆಂಕಿ ತಗುಲಿದೆ. ಪುಂಜಾವಿ ನಿವಾಸಿ ಸಮದ್ ಎಂಬವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries