ಪೆರ್ಲ: ಸಮಾಜದ ಅತಿ ದುರ್ಬಲರು ಹಾಗೂ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಸಮಗ್ರ ಬಂಟ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಬಲ ತುಂಬುವುದು ಬಂಟರ ಸಂಘದ ಪ್ರಮುಖ ಧ್ಯೇಯವಾಗಿದೆ ಎಂಬುದಾಗಿ ಕೊಡುಗೈದಾನಿ, ಉದ್ಯಮಿ, ಡಾ. ಸದಾಶಿವ ಶೆಟ್ಟಿ ಕುಳೂರುಕನ್ಯಾನ ತಿಳಿಸಿದ್ದಾರೆ.
ಅವರು ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ವತಿಯಿಂದ ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಂiÀಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಬಂಟರ ಕೂಟ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಗೆ ಅಭಿಮಾನಪೂರ್ವಕವಾಗಿ ಕುಂಬಳೆ ಸನಿಹದ ನಾರಾಯಣಮಂಗಲದಲ್ಲಿ ಬಂಟರ ಸಂಘಕ್ಕಾಗಿ ಸುಮಾರು 40ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣವೊಂದು ನಿರ್ಮಾಣಗೊಳ್ಳಲಿದ್ದು, ಸಮಾಜದ ಎಲ್ಲಾ ಬಾಂಧವರೂ ಈ ಮಹತ್ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ ರೈ ಸಮಾರಂಭ ಉದ್ಘಾಟಿಸಿದರು. ಯುಎಇ ಮನಿ ಎಕ್ಸ್‍ಚೇಂಜ್ ಮಾಜಿ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಶೇಖ ಅತಿಥಿಯಾಗಿ ಭಾಗವಹಿಸಿದ್ದರು.
ಬಂಟರ ಸಂಘದ ಪದಾಧಿಕಾರಿಗಳಾದ ಸಂತೋಷ್‍ಕುಮಾರ್ ಶೆಟ್ಟಿ ಬಜದಗುತ್ತು, ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ, ಚಿದಾನಂದ ಆಳ್ವ, ಬಿ.ಎಸ್. ಗಾಂಭೀರ,ಸದಾನಂದ ಶೆಟ್ಟಿ ಕುದ್ವ, ಕೊರಗಪ್ಪ ಶೆಟ್ಟಿ ಅಮೆಕ್ಕಳ, ಹರಿಪ್ರಸಾದ್ ಶೆಟ್ಟಿ, ರಾಜಾರಾಮ ಶೆಟ್ಟಿ ಪಟ್ಲ, ರಾಜೇಶ್ವರೀ ಬಜಕೂಡ್ಲು ಉಪಸ್ಥಿತರಿದ್ದರು. ಈ ಸಂದರ್ಭ ಉದ್ಯಮಿ, ಡಾ. ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರನ್ನು ಸಂಘಟನೆ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ಅಧ್ಯಕ್ಷ ನಾರಾಯಣ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶರಶ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿದರು. ವಾಣಿ ಜಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ಚಂದ್ರ ರೈ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಮಧ್ಯಾಹ್ನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಒಳಾಂಗಣ ಕ್ರೀಡಾ ಸ್ಪರ್ಧೆ, ಸಂಜೆ ಬಂಟ ಬಾಂಧವರಿಂದ "ಶ್ರೀದೇವೀ ಲೀಲಾಮೃತ'ಯಕ್ಷಗಾನ ಬಯಲಾಟ ಜರುಗಿತು.





