ಕಾಸರಗೋಡು: ಬಿಲ್ಲವ ಸೇವಾ ಸಂಘ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರ 171ನೇ ಜನ್ಮಜಯಂತಿಯನ್ನು ಕಾಸರಗೋಡಿನ ಕರಂದಕ್ಕಾಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗಣಹೋಮ, ಭಜನೆ, ಹಾಗೂ ಶ್ರೀನಾರಾಯಣ ಗುರು ಪೂಜೆ ಯನ್ನು ನಡೆಸಲಾಯಿತು.
ಈ ಬಗ್ಗೆ ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಘು ಮೀಪುಗುರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಧ್ಯಾಪಕ ಧನರಾಜ್ ಹಾಗೂ ಮಂಜೇಶ್ವರ ಬ್ಲಾಕ್ ಸಹ ಅಭಿವೃದ್ಧಿ ಅಧಿಕಾರಿಯಾಗಿದ್ದ ಸುಲೋಚನಾ ಕುಂಜತ್ತೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಅಂಕ ಗಳಿಸಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಾದ ಅಶ್ವಿನಿ, ವಿದ್ಯಾರ್ಜಿತ್ ಕೆ, ಶ್ರೀಯಾ ಧನರಾಜ್, ಜಿತೇಶ್, ಸಮೀಕ್ಷಾ, ಸಾಯಿಕೃಷ್ಣ ಅವರಿಗೆ ಅಭಿನಂದನೆ ಮತ್ತು ಕೃಷಿ ಕ್ಷೇತ್ರದಲ್ಲಿ ಯುವ ಕೃಷಿಕ ಪ್ರಶಸ್ತಿ ಪಡೆದ ರಂಜಿತ್ ಬೀರಂತಬೈಲು, ನೂತನ ವೈದ್ಯ ರೀತಿ ಅಕ್ಯುಪಂಕ್ಚರ್ ನಲ್ಲಿ ಪ್ರಾವಿಣ್ಯತೆ ಪಡೆದ ನಾಗೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಗೌರವಧ್ಯಕ್ಷ ಕೇಶವ ಕೊಲ್ಕೆಬೈಲ್, ಕೋಶಾಧಿಕಾರಿ ಶಮ್ಮಿ ಕುಮಾರ್, ಸುಕಿರ್ತಿ, ಸತೀಶ್ ಗುಡ್ಡೆಮನೆ, ಸಂತೋಷ್, ಕಮಲಾಕ್ಷ ಸೂರ್ಲು, ಅಶೋಕ್ ಬೀರಂತಬೈಲ್, ಚಂದ್ರಕಲಾ, ರೋಹಿಣಿ, ರವಿ ಪೂಜಾರಿ, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು. ಬಿಲ್ಲವ ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಸ್ವಾಗತಿಸಿದರು. ಪ್ರೆಮಜಿತ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜತೆ ಕಾರ್ಯದರ್ಶಿ ಹರೀಶ್ ಕೆ ಆರ್ ವಂದಿಸಿದರು.





