ಕಾಸರಗೋಡು: ನಗರದ ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ 23ನೇ ವರ್ಷದ ಶ್ರೀಕೃಷ್ಣ ಜಯಂತ್ಯುತ್ಸವ ಹಾಗೂ 14ನೇ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ ಭಾನುವಾರ ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಿತು.
ಬೆಳಗ್ಗೆ ನಡೆದ ಸಮಾರಂಭದಲ್ಲಿ ಮುಂಡೋಡು ತಂತ್ರಿವರ್ಯ ಗಣೇಶ ಭಟ್ ದೀಪ ಪ್ರಜ್ವಲನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿವಿಧ ಭಜನಾ ತಂಡಗಳಿಂದ ಭಜನಾಸಂಕೀರ್ತನೆ ನಡೆಯಿತು. ಈ ಸಂದರ್ಭ ಕಂದಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ, ಶ್ರೀಕೃಷ್ಣ, ರಾಧೆ, ಯಶೋಧಾಕೃಷ್ಣ, ರಾಧಾ ಮತ್ತು ಕೃಷ್ಣ ಹಾಗೂ ಗೀತೋಪದೇಶ(ಕೃಷ್ಣ-ಅರ್ಜುನ)ಒಳಗೊಂಡ ಸ್ಪರ್ಧೆ ಜರುಗಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಷ್ಟಮಿ ಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಬಿ.ನಾರಾಯಣ ಬಾಯ್ಕ್ ಬಹುಮಾನ ವಿತರಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದೀಶ್ ಕೂಡ್ಲು ಸ್ವಾಗತಿಸಿದರು. ಶಿಲ್ಪಾವರಪ್ರಸಾದ್ ವಂದಿಸಿದರು.





