HEALTH TIPS

ತುರ್ತು ಪರಿಸ್ಥಿತಿ ಮನಸ್ಥಿತಿಯ ರಾಹುಲ್‌: ಶಹಜಾದ್ ಪೂನಾವಾಲ ಟೀಕೆ

 ಬೆಂಗಳೂರು: ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲೇ (ಎಮರ್ಜೆನ್ಸಿ ಮೈಂಡ್‍ಸೆಟ್‌ ಆಫ್ ಇಂದಿರಾ) ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್‌ ಪೂನಾವಾಲ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಇಂದಿರಾ ಅವರ ನಿಕಟವರ್ತಿಯೊಬ್ಬರು 'ಇಂದಿರಾ ಈಸ್‌ ಇಂಡಿಯಾ, ಇಂಡಿಯಾ ಈಸ್‌ ಇಂದಿರಾ' ಎಂದಿದ್ದರು.


ಲೋಕತಂತ್ರ, ಸಂವಿಧಾನಕ್ಕಿಂತ ಪರಿವಾರ ತಂತ್ರ ಮಿಗಿಲು ಎಂದು ಅವರು ಭಾವಿಸುತ್ತಾರೆ. ಚುನಾವಣೆಯಲ್ಲಿ ಸೋತರೆ ಆಯೋಗವನ್ನು, ನ್ಯಾಯಾಲಯದಲ್ಲಿ ಹಿನ್ನಡೆಯಾದರೆ ನ್ಯಾಯಾಂಗ ವ್ಯವಸ್ಥೆಯನ್ನು ದೂಷಿಸುತ್ತಾರೆ. ತೆಲಂಗಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವರಿಗೆ ಸಮಸ್ಯೆ ಕಾಣುವುದಿಲ್ಲ. ಮಹಾರಾಷ್ಟ್ರದಲ್ಲಿ ಸೋತಾಗ ಸುಪ್ರೀಂಕೋರ್ಟ್‌ಗೆ ಹೋಗಿದ್ದರು ಎಂದು ಟೀಕಿಸಿದರು.

'ರಾಹುಲ್ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಕಳವು ಕುರಿತು ಮಾತನಾಡುವ ಮೂಲಕ ತಮಿಳುನಾಡಿನಿಂದ ಆಯ್ಕೆಯಾದ ಉಪರಾಷ್ಟ್ರಪತಿ, ಅಲ್ಲಿನ ಜನರನ್ನು ಅವಮಾನಿಸಿದ್ದಾರೆ. ಮತ ಕಳವಿನ ಬಗ್ಗೆ ಮಾತನಾಡುವ ರಾಹುಲ್‌ ಗಾಂಧಿ ಅವರು, ನಂಜೇಗೌಡ, ಜಿ.ಪರಮೇಶ್ವರ ಅವರ ಆಡಿಯೊಗಳ ಬಗ್ಗೆ ಮಾತನಾಡಬೇಕು. ಆ ಆಡಿಯೊದಲ್ಲಿ ಪರಮೇಶ್ವರ ಅವರು ಕಟಾಕಟ್, ಕಟಾಕಟ್‌ ಎಂದು ಮತ ಹಾಕುತ್ತಿದ್ದ ಕುರಿತು ಮಾತನಾಡಿದ್ದಾರೆ. ಹಾಗೆಯೇ, ಶಶಿ ತರೂರ್, ಕೀರ್ತಿ ಆಜಾದ್‌ ಅವರ ವಿಡಿಯೊಗಳನ್ನೂ ನೋಡಬೇಕು. ಇಂದಿರಾ ಗಾಂಧಿಯವರು ಮತದಾನದಲ್ಲಿ ಅಕ್ರಮ ಎಸಗಿ ಶಿಕ್ಷೆಗೆ ಒಳಗಿದ್ದನ್ನು ನೆನಪಿಸಿಕೊಳ್ಳಬೇಕು' ಎಂದರು.

'ನಮಸ್ತೆ ಸದಾ ವತ್ಸಲೆ ಹಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿಕ ಕ್ಷಮೆ ಕೇಳಿಸಲಾಯಿತು. ಈಗ ಕೆಲವು ನಾಯಕರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಕಾರ್ಯಕ್ರಮಗಳಲ್ಲಿ ಭಾಗಹಿಸುವ ಮೂಲಕ ರಾಹುಲ್‍ಗೆ ಸಡ್ಡು ಹೊಡೆಯುತ್ತಿದ್ದಾರೆ' ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್‌, ಮಾಜಿ ಸಂಸದ ಮುನಿಸ್ವಾಮಿ, ಶಾಸಕ ಸಿ.ಕೆ.ರಾಮಮೂರ್ತಿ, ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries