HEALTH TIPS

ಕೊಂಡೆವೂರು ಮಠದಲ್ಲಿ ಶಾರದಾ ಪ್ರತಿಷ್ಠೆ ಮತ್ತು ಸರಸ್ವತೀ ಹವನ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನವರಾತ್ರೋತ್ಸವದ 8 ನೇ  ದಿನವಾದ ಸೋಮವಾರ ಬೆಳಿಗ್ಗೆ 7:30ಕ್ಕೆ ಶ್ರೀ ಶಾರದಾ ಪ್ರತಿಷ್ಠೆ ನಡೆಯಲಿದೆ. ಬಳಿಕ 9: ಕ್ಕೆ ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ಸರಸ್ವತೀ ಹವನ ನಡೆಯಲಿದೆ. ಸೆ.30 ರಂದು ಮಂಗಳವಾರ ದುರ್ಗಾಷ್ಟಮಿ, ಅ. 1 ರಂದು ಬುಧವಾರ ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆಗಳು ಪೂರ್ವಾಹ್ನ ಪೂಜೆಯ ನಂತರ ನಡೆಯಲಿರುವುದು. ಬಳಿಕ "ನಾದ ನಿನಾದ" ಸಂಗೀತ ಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ಶ್ರೀ ದೇವರಿಗೆ ಸಂಗೀತಾರ್ಚನೆ ನಡೆಯಲಿದೆ. ಅ.2 ರಂದು ವಿಜಯದಶಮಿ ಅಂಗವಾಗಿ 5:30 ರಿಂದ ಶ್ರೀ ಗಾಯತ್ರೀ ಮಾತೆಗೆ ವಿಶೇಷ ಸೀಯಾಳ ಅಭಿಷೇಕ, 7:30ಕ್ಕೆ ತೆನೆಪೂಜೆ, ಬಳಿಕ 8ಕ್ಕೆ ವಿದ್ಯಾರಂಭ ನಡೆಯಲಿರುವುದು. 10:30  ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ "ನಾಟ್ಯನಮನ", ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಬಳಿಕ ಶ್ರೀ ಮಠದ ಆನಂದತೀರ್ಥ ಪುಷ್ಕರಣಿಯಲ್ಲಿ  ವಾದ್ಯಘೋಷಗಳ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ, ಮಹಾಮಂತ್ರಾಕ್ಷತೆ ನಡೆಯಲಿರುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries