HEALTH TIPS

ಕಾಸರಗೋಡು: ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ಗೌರವ ಸಲ್ಲಿಸಿದ ಮುಸ್ಲಿಮರು

ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ವಿಶೇಷ ಗೌರವ ಸಲ್ಲಿಸಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಪಾಲಕುನ್ನುವಿನಲ್ಲಿರುವ ಕೊಟಿಕುಳಂ ನೂರುಲ್ ಹುದಾ ಮದರಸಾ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ಕಜಕಂ ಭಗವತಿ ದೇವಸ್ಥಾನಕ್ಕೆ ವಿಶೇಷ ಗೌರವ ಸಲ್ಲಿಸಲಾಗಿದೆ.

ಅನಿಶಿತ್ ಎಂಬವರು ಗೌರವ ಸಲ್ಲಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.


ಇದು ಕೇರಳ, ಇಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಮುಸ್ಲಿಮರು ಹಿಂದೂ ದೇವಾಲಯಕ್ಕೆ ವಂದನೆ ಸಲ್ಲಿಸುವುದು, ಧರ್ಮಗಳ ನಡುವೆ ಗೌರವ ಮತ್ತು ಸಾಮರಸ್ಯ ತೋರಿಸುತ್ತದೆ ಎಂದು ಹೇಳಿದ್ದಾರೆ.

ಓಣಂ ಹಬ್ಬ ಮತ್ತು ಈದ್ ಮಿಲಾದ್ ಜೊತೆಜೊತೆಯಲ್ಲೇ ಬಂದಿದ್ದು, ಕೇರಳದ ಹಲವಾರು ಭಾಗಗಳು ಕೋಮು ಸೌಹಾರ್ದತೆಯ ನಿದರ್ಶನಗಳು ಕಂಡುಬಂದಿವೆ.

ಇಂತಹ ಘಟನೆಗಳ ಕುರಿತು, ಇದು ನಿಜವಾದ ಕೇರಳ ಸ್ಟೋರಿ, ಇದು ನಿಜವಾದ ಭಾರತ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries