ಬದಿಯಡ್ಕ: ಭಾರತ್ ಸ್ಕೌಟ್ ಗೈಡ್ ನ ಘಟಕವಾದ ಬುಲ್ ಬುಲ್ ವಿಭಾಗದ ವಿದ್ಯಾರ್ಥಿನಿಯರಿಗಿರುವ ರಾಜ್ಯ ಮಟ್ಟದ ಪರೀಕ್ಷೆ "ಹೀರಕ್ ಪಂಕ್" ನಲ್ಲಿ ಕಲ್ಲಕಟ್ಟ ಯಂ.ಎ.ಯು.ಪಿ.ಶಾಲೆಯ ವಿದ್ಯಾರ್ಥಿನಿಗಳಾದ ಸಮನ್ಯಯು, ವಿನಿಷ ರೋಡ್ರಿಗಸ್, ವೀಕ್ಷ ಯಂ, ಗಾಯತ್ರಿ ಎಂ., ಸುಮನ, ಅಲೀಷ ರೋಡ್ರಿಗಸ್ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು,ಪಿಟಿಎ ಸಮಿತಿ ಅಭಿನಂದಿಸಿದ್ದಾರೆ.





