ಪೆರ್ಲ : ಶೇಣಿ ಶ್ರೀಶಾರದಾಂಬ ವಿದ್ಯಾ ಸಂಸ್ಥೆಯ ಎಯುಪಿ ಹಾಗೂ ಪ್ರೌಢ ಶಾಲಾ ವಿಭಾಗದ ಸ್ಕೌಟ್ ಮತ್ತು ಗೈಡ್ ಘಟಕಗಳು ಸ್ನೇಹಪೂರ್ವ ಪದ್ಧತಿಯ ಅಂಗವಾಗಿ ಎಣ್ಮಕಜೆ ಪಂಚಾಯತಿ ಬೆದ್ರಂಪಳ್ಳ ವಾರ್ಡಿನ ಮಣಿಯಂಪಾರೆಯಲ್ಲಿ ನಿರ್ಮಿಸಿದ ಬಸ್ ತಂಗುದಾಣದ ಉದ್ಘಾಟನೆ ಮಂಗಳವಾರ ನಡೆಯಿತು.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿ ಮಾತನಾಡಿ, ಮಾನವಿಯತೆಯ ಸೇವೆಯಿಂದ ಮಾನವ ಮಾಧವನಾಗಬಲ್ಲ ಇಂತಹ ಸುಸಂಸ್ಕøತ ವಿಚಾರಧಾರೆಗಳನ್ನು ಮಕ್ಕಳಿಗೆ ಕಲಿಸುವ ಜತೆಗೆ ಸ್ವತಃ ಅನುಭವ ವೇದ್ಯವಾಗಿಸುವ ಇಂತಹ ಸಮಾಜೋನ್ಮುಖಿ ಕಾರ್ಯಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಮೈಲುಗಲ್ಲಾಗಲಿದೆ ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ ಎಸ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಮ್,ಗೈಡ್ಸ್ ಜಿಲ್ಲಾ ಕಮೀಶನರ್ ಶ್ರೀಕುಮಾರಿ ಟೀಚರ್, ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಜೆ ಎಸ್ , ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯೆ ಕುಸುಮಾವತಿ,ಗ್ರಾ.ಪಂ.ಮಾಜಿ ಅಧ್ಯಕ್ಷೆ ಪ್ರೇಮಾ ಎಂ, ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಶಾಸ್ತ ಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ ಶುಭಾಶಂಸನೆಗೈದರು.ಪಿಟಿಎ ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ,ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಯುಪಿ ಪಿಟಿಎ ಅಧ್ಯಕ್ಷ ಅಬೂಬಕರ್ ಪೆರ್ದನೆ, ಸ್ಕೌಟ್ ಜಿಲ್ಲಾ ಕಾರ್ಯ ನಿರ್ವಾಹಕ ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಬಿ ಆರ್ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ಸಜಿತ ಕೆ. ವಂದಿಸಿದರು.

.jpg)
.jpg)
