ಪೆರ್ಲ: ಪೆರ್ಲದ ಮರಾಟಿ ಬೋಡಿರ್ಂಗ್ ಹಾಲ್‍ನ 7ನೇ ವಾರ್ಷಿಕೋತ್ಸವದ ಅಂಗವಾಗಿ ಮರಾಟಿ ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ದೆಗಳು ಸೆ. 28ರಂದು ಬೆಳಗ್ಗೆ 10ಕ್ಕೆ ಪೆರ್ಲದ ಮರಾಟಿ ಬೋರ್ಡಿಂಗ್ ಹಾಲ್‍ನಲ್ಲಿ ಜರುಗಲಿದೆ.
ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಲಿದೆ.
ಅಂಗನವಾಡಿ ವಿಭಾಗದ ಮಕ್ಕಳಿಗಾಗಿ ಅಭಿನಯ ಗೀತೆ, ನಾಣ್ಯ ಹೆಕ್ಕುವುದು, ಬಕೆಟಿಗೆ ಚೆಂಡು ಹಾಕುವುದು, ಎಲ್‍ಪಿ ವಿಭಾಗದ ಮಕ್ಕಳಿಗಾಗಿ ರಾಷ್ಟ್ರ ನಾಯಕರ ಹೆಸರು ಹೇಳುವುದು, ಚಿತ್ರ ಬಿಡಿಸುವುದು, ಸೂಜಿಗೆ ದಾರಪೆÇೀಣಿಸುವುದು, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮರಾಟಿಯಲ್ಲಿ ಭಾಷಣ, ರಸಪ್ರಶ್ನೆ, ಸುಂದರಿಗೆ ತಿಲಕ ಇಡುವುದು, ಪಿಯುಸಿಯಿಂದ ಸ್ನಾತಕೋತ್ತರಪದವಿ ವರೆಗಿನ ವಿದ್ಯಾರ್ಥಿಗಳಿಗೆ ಮರಾಟಿ ಭಾಷೆಯಲ್ಲಿ ಭಾಷಣ, ಪದಗಳನ್ನು ನೆನಪಿಟ್ಟು ಹೇಳುವುದು, ಗೂಟಕ್ಕೆ ರಿಂಗ್ ಹಾಕುವುದು, ಪುರುಷ ಮತ್ತು ಮಹಿಳೆಯರಿಗಾಗಿ ಮರಾಟಿಯಲ್ಲಿ ಭಾಷಣ, ಆಶು ನಟನೆ, ಮಿಮಿಕ್ರಿ, 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಹಾಗೂ ಮಹಿಳೆಯರಿಗೆ ನೆನಪಿನ ಶಕ್ತಿ, ಮೇಣದಬತ್ತಿ ಉರಿಸುವುದು ಹಾಗೂ ವಸ್ತುಗಳನ್ನು ಊಹಿಸಿ ಹೇಳುವ ಸ್ಪರ್ಧೆ ನಡೆಯುವುದು.

