ನವದೆಹಲಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಧನಾತ್ಮಕ ನಡೆಯನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದೊಂದಿಗೆ ಅಮೆರಿಕಕ್ಕೆ ವಿಶೇಷ ಸಂಬಂಧ ಇದೆ, ಸ್ವಲ್ಪ ಕಾಯಿರಿ: ಡೊನಾಲ್ಡ್ ಟ್ರಂಪ್
ಭಾರತ ಹಾಗೂ ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ, ನನಗೂ ಮೋದಿಗೂ ಉತ್ತಮ ಸ್ನೇಹ ಸಂಬಂಧವಿದೆ.
ಸ್ವಲ್ಪ ಕಾಯಿರಿ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹೀಗೆ ಬರೆದುಕೊಂಡಿದ್ದಾರೆ.
'ಡೊನಾಲ್ಡ್ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರು ಸಕಾರಾತ್ಮಕ ಮೌಲ್ಯಮಾಪ ಮಾಡಿದ್ದಾಗಿ ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ' ಎಂದು ಮೋದಿ ಬರೆದುಕೊಂಡಿದ್ದಾರೆ.
ಸಮಗ್ರ ಹಾಗೂ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತ ಹಾಗೂ ಅಮೆರಿಕ ಸಕಾರಾತ್ಮಕವಾಗಿ ಎದುರು ನೋಡುತ್ತಿವೆ' ಎಂದು ಮೋದಿ ಹೇಳಿದ್ದಾರೆ.
'ನಾನು ನರೇಂದ್ರ ಮೋದಿ ಜೊತೆ ಎಂದಿಗೂ ಸ್ನೇಹಿತನಾಗಿರುತ್ತೇನೆ. ಅವರು ಅದ್ಭುತ ಪ್ರಧಾನಿ. ಆದರೆ ಅವರು ಈಗ ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಆದರೂ ಅಮೆರಿಕ ಹಾಗೂ ಭಾರತ ನಡುವೆ ವಿಶೇಷ ಬಾಂಧವ್ಯವಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ. ಸ್ವಲ್ಪ ಸಮಯ ಕಾಯಿರಿ' ಎಂದು ಟ್ರಂಪ್ ಶುಕ್ರವಾರ ತಮ್ಮ ಓವಲ್ ಕಚೇರಿಯಲ್ಲಿ ಹೇಳಿದ್ದರು.




