ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಕಳೆದ ಹನ್ನೊಂದು ದಿವಸಗಳಿಂದ ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆದುಬರುತ್ತಿರುವ 70ನೇ ವರ್ಷದ ಆಚರಣೆ'ಸಪ್ತತಿ ಮಹೋತ್ಸವ'ದ ಸಮಾರೋಪ ಸಮಾರಂಭ ಶಣೀವಾರ ನಡೆಯಿತು.
ಮಧ್ಯಾಹ್ನ 12ರಿಂದ ನೂರಾರು ಮಂದಿ ಭಕ್ತಾದಿಗಳ ಉಪಸ್ಥಿತಿಯಲ್ಲಿ ಅಯುತ ನಾಳಿಕೇರ ಮಹಾಗಣಪತಿಯಾಗದ ಮಹಾಪೂರ್ಣಾಹುತಿ ನಡೆಯಿತು. ಪರಮಪೂಜ್ಯ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಪ್ತತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಿ. ವಿ. ಪೆÇದುವಾಳ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶ್ರೀ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮ ವೇದ ವೇದ್ಯಾಮೃತ ಚೈತನ್ಯ ದಿವ್ಯ ಉಪಸ್ಥಿತಿ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಕೀಲ ಭರತ್‍ವೆಂಕಟೇಶ್ ಹಾಗೂ ಚಿತ್ರನಟ, ರಂಗಕಲಾವಿದ ಕಾಸರಗೋಡು ಚಿನ್ನಾ ಬಹುಮಾನ ವಿತರಿಸಿದರು. ನಂತರ ಧ್ವಜಾವರೋಹಣ, ಮಹಾಪೂಜೆ ಶ್ರೀ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಿತು.





