HEALTH TIPS

BRS ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷ; ನಾಲ್ಕನೇ ಸ್ಥಾನದಲ್ಲಿ TDP

ವಿಜಯವಾಡ: ಆಡಳಿತಾರೂಢ ತೆಲುಗು ದೇಶಂ ಪಕ್ಷ(ಟಿಡಿಪಿ) ತನ್ನ ಆದಾಯದಲ್ಲಿ ಮೂರು ಪಟ್ಟು ಹೆಚ್ಚಿಸಿಕೊಂಡಿದ್ದು, 2023-24ರ ಆರ್ಥಿಕ ವರ್ಷದಲ್ಲಿ 285.07 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿ ತಿಳಿಸಿದೆ.

ಟಿಡಿಪಿ 2022-23ರ ಆರ್ಥಿಕ ವರ್ಷದಲ್ಲಿ 63.9 ಕೋಟಿ ರೂ. ಆದಾಯ ಗಳಿಸಿತ್ತು.

ಅಧಿಕಾರಕ್ಕೆ ಬಂದ ನಂತರ ತನ್ನ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ದೇಶದ ನಾಲ್ಕನೇ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ ಕೊಡುಗೆಗಳು ಮತ್ತು ದೇಣಿಗೆಗಳನ್ನು ಪಡೆಯುವಲ್ಲಿ ಅಗ್ರಸ್ಥಾನದಲ್ಲಿದೆ.

ವಿರೋಧ ಪಕ್ಷವಾದ ವೈಎಸ್‌ಆರ್‌ಸಿಪಿ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 191 ಕೋಟಿ ರೂ. (1.6 ಪಟ್ಟು ಹೆಚ್ಚಳ) ಆದಾಯ ಗಳಿಸಿದೆ. ಪ್ರಾದೇಶಿಕ ಪಕ್ಷಗಳ ಆದಾಯದ ಡೇಟಾವನ್ನು ಭಾರತದ ಚುನಾವಣಾ ಆಯೋಗ(ಇಸಿಐ)ದಿಂದ ಪಡೆಯಲಾಗಿದೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ತಿಳಿಸಿದೆ.

ಆಶ್ಚರ್ಯಕರವಾಗಿ, ರಾಜ್ಯದ ಪ್ರಸ್ತುತ ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ ಸ್ಥಾಪಿಸಿದ ಜನ ಸೇನಾ ಪಕ್ಷವು ಇಸಿಐಗೆ ಸಲ್ಲಿಸಿದ ಆದಾಯ ಮತ್ತು ವೆಚ್ಚದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 2013 ರಲ್ಲಿ ಸ್ಥಾಪನೆಯಾದ ಈ ಪಕ್ಷವು 2019 ಮತ್ತು 2024 ರಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ವರದಿಯ ಪ್ರಕಾರ, ಭಾರತೀಯ ರಾಷ್ಟ್ರ ಸಮಿತಿ(ಬಿಆರ್‌ಎಸ್) 685.5 ಕೋಟಿ ರೂ. ಆದಾಯದೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್(ಎಐಟಿಎಂಸಿ) 646 ಕೋಟಿ ರೂ. ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಬಿಜು ಜನತಾ ದಳ(ಬಿಜೆಡಿ) 297 ಕೋಟಿ ರೂ., ತೆಲುಗು ದೇಶಂ ಪಕ್ಷ(ಟಿಡಿಪಿ) 287 ಕೋಟಿ ರೂ. ಮತ್ತು ಯುವಜನ ರೈತ ಶ್ರಮಿಕ ಕಾಂಗ್ರೆಸ್ ಪಕ್ಷ(ವೈಎಸ್‌ಆರ್‌ಸಿಪಿ) 191 ಕೋಟಿ ರೂ. ಆದಾಯದೊಂದಿಗೆ ನಂತರದ ಸ್ಥಾನದಲ್ಲಿವೆ.

ಕಳೆದ ವರ್ಷ ನಡೆದ ಚುನಾವಣೆಗಳಲ್ಲಿ ಟಿಡಿಪಿ 121 ಕೋಟಿ ರೂ. ಮತ್ತು ವೈಎಸ್‌ಆರ್‌ಸಿ 295 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

40 ಪ್ರಾದೇಶಿಕ ರಾಜಕೀಯ ಪಕ್ಷಗಳ ಒಟ್ಟು ಆದಾಯ 1,796 ಕೋಟಿ ರೂ. ಆಗಿದ್ದು, ಶೇಕಡಾ 70 ಕ್ಕಿಂತ ಹೆಚ್ಚು ಚುನಾವಣಾ ಬಾಂಡ್‌ಗಳ(ಇಬಿ) ಮೂಲಕ ದೇಣಿಗೆ ಬಂದಿದೆ ಎಂದು ಇಸಿಐಗೆ ಸಲ್ಲಿಸಿದ ದಾಖಲೆಗಳಿಂದ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries