ನವದೆಹಲಿ: ಕುಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತೀಯ ಲಾಭರಹಿತ ಸಂಸ್ಥೆ 'ಇಜuಛಿಚಿಣe ಉiಡಿಟs'ಗೆ 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸಂಸ್ಥೆಯಾಗಿ 'ಇಜuಛಿಚಿಣe ಉiಡಿಟs' ಇತಿಹಾಸ ನಿರ್ಮಿಸಿದೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ (ಆರ್‌ಎಂಎಎಫ್) ಹೇಳಿಕೆಯಲ್ಲಿ ತಿಳಿಸಿದೆ.
ನೊಬೆಲ್ ಪ್ರಶಸ್ತಿಗೆ ಏಷ್ಯಾದ ಸಮಾನವೆಂದು ಪರಿಗಣಿಸಲಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಷ್ಯಾದ ಜನರಿಗೆ ನಿಸ್ವಾರ್ಥ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.
ಮಾಲ್ಡೀವ್ಸ್‌ನ ಶಾಹಿನಾ ಅಲಿ ಮತ್ತು ಫಿಲಿಪೈನ್ಸ್‌ನ ಫ್ಲೇವಿಯಾನೊ ಆಂಟೋನಿಯೊ ಎಲ್ ವಿಲ್ಲಾನುಯೆವಾ ಅವರಿಗೂ ಈ ಸಾಲಿನ ಮ್ಯಾಗ್ಸೆಸೆ ಗೌರವ ಸಿಕ್ಕಿದೆ.
ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು ರಾಮನ್ ಮ್ಯಾಗ್ಸೆಸೆ ಅವರ ಚಿತ್ರವಿರುವ ಪದಕ, ಅವರ ಉಲ್ಲೇಖದೊಂದಿಗೆ ಕೆತ್ತಿದ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಸ್ವೀಕರಿಸುತ್ತಾರೆ ಎಂದು ಹೇಳಿಕೆ ತಿಳಿಸಿದೆ.
67ನೇ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7ರಂದು ಮನಾಲಿಯಲ್ಲಿ ನಡೆಯಲಿದೆ.




