HEALTH TIPS

ಪ್ರಚಾರ ಪಡೆಯಲು ವಂತಾರಾ ಮೇಲೆ ಕೇಸ್ ಹಾಕಿದ್ರು: ಅರ್ಜಿದಾರರಿಗೆ ಕುಟುಕಿದ SIT

 ವದೆಹಲಿ: ಗುಜರಾತ್‌ನ ಜಾಮ್‌ನಗರದ ವಂತಾರಾ ಮೃಗಾಲಯ ಯಾವುದೇ ಜಲಮೂಲಗಳನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಎಸ್‌ಐಟಿ ಸುಪ್ರೀಂಕೋರ್ಟ್‌ಗೆ ಅರುಹಿದೆ.

ಕೇವಲ ಮಾಧ್ಯಮಗಳಲ್ಲಿ ಗಮನ ಸೆಳೆಯಲು ಹಾಗೂ ಪ್ರಚಾರ ಪಡೆಯಲು ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 


ವಂತಾರಾ ಮೃಗಾಲಯ ಯಾವುದೇ ಜಲಮೂಲಗಳನ್ನು ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕಾರ್ಬನ್ ಕ್ರೆಡಿಟ್ ಪಡೆಯಲು ಯಾವುದೇ ಕಾನೂನು ಉಲ್ಲಂಘನೆಗಳನ್ನು ಮಾಡಿಲ್ಲ ಎಂದು ಎಸ್‌ಐಟಿ ತನ್ನ ತನಿಖೆಯಲ್ಲಿ ಕಂಡಿತ್ತು.

ಎಸ್‌ಐಟಿ ಕಳೆದ ಸೋಮವಾರ ಸುಪ್ರೀಂಕೋರ್ಟ್‌ಗೆ ತನ್ನ ತನಿಖಾ ವರದಿ ಸಲ್ಲಿಸಿತ್ತು. ಕಾರ್ಬನ್ ಕ್ರೆಡಿಟ್ ಎಂದರೆ ಪರಿಸರ ರಕ್ಷಣೆ, ಪ್ರಾಣಿ ಕಲ್ಯಾಣ ಸಂಬಂಧಿತ ಚಟುವಟಿಕೆಗಳನ್ನು ನಡೆಸಿ ಜಾಗತಿಕವಾಗಿ ಎನ್‌ಜಿಒಗಳಿಂದ ಹಾಗೂ ಇತರರಿಂದ ಹಣಕಾಸು ಅಥವಾ ಇನ್ನೀತರ ಸೌಲಭ್ಯಗಳನ್ನು ಪಡೆಯುವುದು ಆಗಿದೆ.

ಕಾನೂನು ಉಲ್ಲಂಘಿಸಿ ದೇಶ, ವಿದೇಶಗಳಿಂದ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪದಡಿ ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಕಳೆದ ವಾರ ರಚಿಸಿತ್ತು.

ಪ್ರಾಣಿ, ಪಕ್ಷಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ರಿಲಯನ್ಸ್ ಫೌಂಡೇಶನ್ ವಂತಾರಾ ಎಂಬ ವನ್ಯಜೀವಿ ಸಂರಕ್ಷಣೆ ಕೇಂದ್ರವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಿದೆ.

ಮಾಧ್ಯಮಗಳು, ಸಾಮಾಜಿಕ ಜಾಲತಾಣ ಮತ್ತು ಎನ್‌ಜಿಒ ಹಾಗೂ ವನ್ಯಜೀವಿ ಸಂಸ್ಥೆಗಳಿಂದ ಬಂದ ದೂರುಗಳ ಆಧಾರದ ಮೇಲೆ ವಂತಾರಾದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಎರಡು ಪಿಐಎಲ್‌ ಅರ್ಜಿನಗಳು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ.ಬಿ ವರಾಲೆ ಅವರಿದ್ದ ಪೀಠವು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜೆ.ಚೆಲಮೇಶ್ವರ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿತ್ತು.

ಎಸ್‌ಐಟಿ, ವಂತಾರಾ ಮೇಲೆ ಬಂದಿರುವ ಎಲ್ಲ ಆರೋಪಗಳು ನಿರಾಧಾರ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries