ಹೈದರಾಬಾದ್: ಭಾರತದ ಜನಸಂಖ್ಯೆಯಲ್ಲಿ ಶೇ 0.5ರಷ್ಟಿರುವ ಜೈನ ಸಮುದಾಯದಿಂದ ಶೇ 24ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಮೂರು ದಿನಗಳ ಜೆಐಟಿಒ ಕನೆಕ್ಟ್ 2025 (ಜೈನ ಅಂತರರಾಷ್ಟ್ರೀಯ ವ್ಯಾಪರ ಸಂಸ್ಥೆ) ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯವು ಜಗತ್ತಿನ ಅತ್ಯಂತ ಪರಿಶ್ರಮ ಜೀವಿಗಳಿರುವ ಸಮೃದ್ಧ ಸಮಾಜವೆಂದು ಪರಿಗಣಿಸಲಾಗಿದೆ ಎಂದರು.
ಈ ಸಮುದಾಯವು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಬೇರೂರಿದೆ. ಅದರ ಇತಿಹಾಸವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಭಾರತದ ಆರ್ಥಿಕತೆಯಲ್ಲಿ ಜೈನ ಸಮುದಾಯದ ಕೊಡುಗೆ ಮಹತ್ವದ್ದು. ಔಷಧ, ಶಿಕ್ಷಣ ಮತ್ತು ವಾಯುಯಾನ ಕ್ಷೇತ್ರದಲ್ಲೂ ಜೈನರು ಮುಂದಿದ್ದಾರೆ ಎಂದು ಸಿಂಗ್ ಹೇಳಿದರು.
---
-ಪಾಕಿಸ್ತಾನ ವಿರುದ್ಧದ ದಾಳಿ ವೇಳೆ ಭಾರತ ಧರ್ಮವನ್ನು ನೋಡಿಲ್ಲ. ಪ್ರಜೆಗಳ ರಕ್ಷಣೆ ಮತ್ತು ಭಾರತದ ಏಕತೆ- ಸಮಗ್ರತೆಗಾಗಿ ದೇಶವು ಯಾವುದೇ ಗಡಿಯನ್ನು ಬೇಕಾದರೂ ದಾಟಬಲ್ಲದು
-ರಾಜನಾಥ್ ಸಿಂಗ್ ರಕ್ಷಣಾ ಸಚಿವ




