HEALTH TIPS

ಇನ್ನು 150 ವರ್ಷ ಬದುಕೋದು ಕಟ್ಟುಕತೆಯಲ್ಲ: ರಷ್ಯಾ ವಿಜ್ಞಾನಿ

ಸುದೀರ್ಘ ಯೌವನ ಅಥವಾ 150 ವರ್ಷ ಬದುಕುವುದು ಈಗ ಕಟ್ಟುಕತೆಯಾಗಿ ಉಳಿದಿಲ್ಲ. ಅಂತಹ ಸಾಮರ್ಥ್ಯ ಇರುವವರು ಈಗಾಗಲೇ ಜನಿಸಿಯಾಗಿದೆ ಎಂದು ರಷ್ಯಾದ ವಿಜ್ಞಾನಿ ವಿಟಾಲಿ ಕೊವಾಲೆವ್‌ ಹೇಳಿದ್ದಾರೆ.

ಔಷಧ ಮತ್ತು ಆರೋಗ್ಯದ ಬಗೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ವಿಟಾಲಿ, 'ವೈಜ್ಞಾನಿಕ ಸಿದ್ಧಾಂತವನ್ನು ವೈದ್ಯಕೀಯ ಅಭ್ಯಾಸವಾಗಿ ಪರಿವರ್ತಿಸುವುದು ಮುಂದಿನ ಎರಡು ದಶಕಗಳ ಗುರಿ.

150 ಬದುಕಬಲ್ಲವರು ಈಗಾಗಲೇ ಹುಟ್ಟಿದ್ದು, 20, 30, 40 ವಯಸ್ಸಿನವರಾಗಿದ್ದಾರೆ. ಅಂತೆಯೇ, ಮರಳಿ ಯೌವನವನ್ನು ಪಡೆಯುವುದು ಅಸಂಭವ ಎಂಬುದು ತಪ್ಪು ತಿಳುವಳಿಕೆ. ಇದನ್ನು ಸಾಧ್ಯವಾಗಿಸುವ ವಸ್ತು ತಯಾರಿಕೆಯ ಕೆಲಸಗಳು ಪ್ರಯೋಗಾಲಯಗಳಲ್ಲಿ ಈಗಾಗಲೇ ನಡೆಯುತ್ತಿವೆ' ಎಂದು ಹೇಳಿದ್ದಾರೆ.

ಈ ಮೂಲಕ, ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವವರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತಾ ಸಾಗುತ್ತಿದ್ದರೂ, ದೀರ್ಘಾಯುಗಳಾಗುವುದು ಅಸಾಧ್ಯವಲ್ಲ ಎಂದು ವಿಟಾಲಿ ಪ್ರತಿಪಾದಿಸಿದ್ದಾರೆ. ಆದರೆ ಶತಾಯುಷಿಗಳಾಗಲಿರುವವರು ಯಾರು? ವಯಸ್ಸಾಗುವುದನ್ನು ತಡೆಯಲು ಯಾವ ವಿಧಾನವನ್ನು ಆವಿಷ್ಕರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಹಿಂದೊಮ್ಮೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಬೀಜಿಂಗ್‌ನಲ್ಲಿ ಭೇಟಿಯಾಗಿದ್ದಾಹ, ಅಂಗಾಗ ಕಸಿಯ ಮೂಲಕ ಅಮರರಾಗುವ ಬಗ್ಗೆ ಚರ್ಚಿಸಿದ್ದನ್ನು ಹಾಗೂ ಆಧುನಿಕ ಔಷಧದಿಂದ ದೀರ್ಘಾಯುವಾಗುವುದು ಸಾಧ್ಯ ಎಂದು ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

150 ವರ್ಷ ಬದುಕಬಲ್ಲವರು ಜನಿಸಿಯಾಗಿದೆ

ಅವರೆಲ್ಲ ಈಗ 20, 30, 40ರ ಹರೆಯದವರು

ಅಮರತ್ವದ ಬಗ್ಗೆ ಕ್ಸಿ ಜತೆ ಚರ್ಚಿಸಿದ್ದ ಪುಟಿನ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries