ಬದಿಯಡ್ಕ: ಶ್ರೀ ದೈವಗಳ ಸೇವಾಸಮಿತಿ ಹಾಗೂ ಹರಿಹರ ಭಜನಾ ಮಂದಿರ ಮಾಡತ್ತಡ್ಕ ಕುಂಟಿಕಾನ ಇವರ ನೇತೃತ್ವದಲ್ಲಿ ಡಿಸೆಂಬರ್ 16 ಮತ್ತು 17 ರಂದು ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದ ವಠಾರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವವು ಜರಗಲಿರುವುದು. ಈ ಸಂಬಂಧ ಭಾನುವಾರ ಶ್ರೀ ಮಂದಿರದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಗೌರವಾಧ್ಯಕ್ಷ ಗೋವಿಂದ ಭಟ್ ಮಿಂಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ, ಧಾರ್ಮಿಕ ಪ್ರಮುಖ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ರಾಮಪ್ಪ ಮಂಜೇಶ್ವರ, ಸುಬ್ರಹ್ಮಣ್ಯ ಭಟ್ ಅಣಬೈಲು, ಗ್ರಾಮ ಪಂಚಾಯತಿ ಸದಸ್ಯೆ ಜಯಶ್ರೀ ಪಿ., ಮಂದಿರದ ಗುರುಸ್ವಾಮಿ ರವಿ ಕುಂಟಿಕಾನ ಶುಭಾಶಂಸನೆಗೈದರು. ಕಾರ್ಯದರ್ಶಿ ಜಯಪ್ರಕಾಶ್ ದೇವರಮೆಟ್ಟು ಸ್ವಾಗತಿಸಿ, ನಾಗೇಶ ವಂದಿಸಿದರು.

.jpg)
