ಇದು ಖಂಡದಾದ್ಯಂತ ಕಾರ್ಯನಿರ್ವಹಿಸುವ ಸುಸಂಘಟಿತ ಕಳ್ಳ ಸಾಗಾಟವನ್ನು ಬಹಿರಂಗಪಡಿಸಿದೆ.
ಚಿನ್ನ ಕಳ್ಳ ಸಾಗಾಟದ ತಡೆ ಹಾಗೂ ವಶಕ್ಕೆ ಸಂಬಂಧಿಸಿ 65 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಸುಸಂಘಟಿತ ತಂಡ ಎಚ್ಚರಿಕೆಯಿಂದ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ತೋರಿಸಿದೆ.
ಡಿಆರ್‌ಐ ಮಹಾನಿರ್ದೇಶಕ ಅಭಯ್ ಕುಮಾರ್ ಅವರು ಈ ವರ್ಷ ಎಪ್ರಿಲ್‌ನಲ್ಲಿ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದರು. ಸಂಘಟಿತ ಅಂತಾರಾಷ್ಟ್ರೀಯ ಅಪರಾಧ ಗುಂಪು ಹಾಗೂ ಕೆಲವು ಸರಕಾರಿ ಅಧಿಕಾರಿಗಳು ಭಾಗಿಯಾದ ಚಿನ್ನ ಕಳ್ಳ ಸಾಗಾಟ ಜಾಲದ ಬಗ್ಗೆ ತನಿಖೆ ನಡೆಸುವಂತೆ ಅವರು ಸೂಚಿಸಿದ್ದರು.
ಒಂದು ಕಿ.ಗ್ರಾಂ. ಚಿನ್ನ ವಶಕ್ಕೆ ತೆಗೆದುಕೊಂಡರೆ, ಮೂರರಿಂದ ಐದು ಕಿ.ಗ್ರಾಂ. ಚಿನ್ನ ಯಶಸ್ವಿಯಾಗಿ ಭಾರತ ಪ್ರವೇಶಿಸಿದೆ ಎಂದು ಸಿಬಿಐ ಪ್ರತಿಪಾದಿಸಿದೆ. ಡಿಆರ್‌ಐ ಚಿನ್ನ ವಶಪಡಿಸಿಕೊಂಡ ಹಾಗೂ ತಡೆ ಒಡ್ಡಿದ ಕುರಿತ ದತ್ತಾಂಶವನ್ನು ಸುದ್ದಿ ಸಂಸ್ಥೆಯೊಂದು ವಿಶ್ಲೇಷಿಸಿದೆ. ಈ ವಿಶ್ಲೇಷಣೆಯಲ್ಲಿ ಅದು ಈ ವರ್ಷ ಚಿನ್ನ ಕಳ್ಳ ಸಾಗಾಟ ಮಾಡಲು ಅಪರಾಧಿಗಳು ವಾಯು ಹಾಗೂ ಭೂ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿದೆ.




