HEALTH TIPS

2026: ಆಸಿಯಾನ್‌-ಭಾರತ ಕಡಲ ಸಹಕಾರ ವರ್ಷ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: ಆಸಿಯಾನ್‌ ಮತ್ತು ಭಾರತ ನಡುವಿನ ಸಮಗ್ರ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಹಾಗೂ ಅಭಿವೃದ್ಧಿಗೆ ಪ್ರಬಲ ಅಡಿಪಾಯವಾಗಲಿದೆ. ಹೀಗಾಗಿ 2026 ಅನ್ನು 'ಆಸಿಯಾನ್‌-ಭಾರತ ಕಡಲ ಸಹಕಾರ ವರ್ಷ' ಎಂಬುದಾಗಿ ಘೋಷಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಸಾಗರ ಸುರಕ್ಷತೆ ಹಾಗೂ 'ನೀಲಿ ಆರ್ಥಿಕತೆ' ಕ್ಷೇತ್ರಕ್ಕೆ ಸಂಬಂಧಿಸಿ ಆಸಿಯಾನ್‌ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಕೂಡ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದ 2026 ಅನ್ನು 'ಆಸಿಯಾನ್‌-ಭಾರತ ಸಾಗರ ಸಹಕಾರ ವರ್ಷ' ಎಂಬುದಾಗಿ ಘೋಷಿಸಲಾಗುತ್ತದೆ ಎಂದು ವಿವರಿಸಿದರು.

ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆರಂಭವಾದ ಮೂರು ದಿನಗಳ ಆಸಿಯಾನ್‌ ವಾರ್ಷಿಕ ಶೃಂಗಸಭೆಯನ್ನು ವರ್ಚುವಲ್‌ ವಿಧಾನ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.

'ವಿಶ್ವದ ಹಲವೆಡೆ ಈಗ ಅನಿಶ್ಚಿತ ಸ್ಥಿತಿ ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ಮತ್ತು ಆಸಿಯಾನ್‌ ನಡುವಿನ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ' ಎಂದರು.

'ಶಿಕ್ಷಣ, ಪ್ರವಾಸ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್‌ ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಆಸಿಯಾನ್‌ ಸದಸ್ಯ ರಾಷ್ಟ್ರಗಳ ಮಧ್ಯೆ ಸಹಕಾರ ಹೆಚ್ಚುತ್ತಿದೆ. ಸದಸ್ಯ ರಾಷ್ಟ್ರಗಳ ಜನರ ನಡುವಿನ ಸಂಬಂಧವನ್ನು ಬಲಪಡಿಸುವುದು, ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲಾಗುವುದು' ಎಂದು ಮೋದಿ ಹೇಳಿದರು.ಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶದ ವಿದ್ಯಮಾನಗಳಿಗೆ ಸಂಬಂಧಿಸಿ ಆಸಿಯಾನ್‌ ಪ್ರಮುಖ ಪಾತ್ರವಹಿಸಬೇಕು ಎಂಬ ವಿಚಾರವನ್ನು ಭಾರತ ಯಾವಾಗಲೂ ಬೆಂಬಲಿಸುತ್ತಾ ಬಂದಿದೆ ನರೇಂದ್ರ ಮೋದಿ ಪ್ರಧಾನಿ

ನರೇಂದ್ರ ಮೋದಿ ಪ್ರಧಾನಿಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶದ ವಿದ್ಯಮಾನಗಳಿಗೆ ಸಂಬಂಧಿಸಿ ಆಸಿಯಾನ್‌ ಪ್ರಮುಖ ಪಾತ್ರವಹಿಸಬೇಕು ಎಂಬ ವಿಚಾರವನ್ನು ಭಾರತ ಯಾವಾಗಲೂ ಬೆಂಬಲಿಸುತ್ತಾ ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries