HEALTH TIPS

ಜಾರ್ಖಂಡ್‌: ಈ ವರ್ಷ 266 ನಕ್ಸಲರ ಬಂಧನ, 32 ಮಂದಿ ಹತ್ಯೆ

ರಾಂಚಿ: ಜಾರ್ಖಂಡ್‌ನಲ್ಲಿ ಪ್ರಸಕ್ತ ವರ್ಷ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 266 ನಕ್ಸಲರನ್ನು ಬಂಧಿಸಲಾಗಿದೆ, 32 ಮಂದಿಯನ್ನು ಹತ್ಯೆ ಮಾಡಲಾಗಿದೆ ಮತ್ತು 30 ಮಂದಿ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬಂಧಿತರಲ್ಲಿ ಸಿಪಿಐಗೆ ಸೇರಿದ ಪ್ರಾದೇಶಿಕ ಸಮಿತಿಯ ಇಬ್ಬರು ಸದಸ್ಯರು, ಒಬ್ಬರು ವಲಯ ಕಮಾಂಡರ್‌, ಇಬ್ಬರು ಉಪ ವಲಯ ಕಮಾಂಡರ್‌ ಮತ್ತು ಒಂಬತ್ತು ಮಂದಿ ಪ್ರದೇಶ ಕಮಾಂಡರ್‌ ಸೇರಿದ್ದಾರೆ ಎಂದು ಅವರು ಮಂಗಳವಾರ ತಿಳಿಸಿದರು.

'ಜನವರಿ 1ರಿಂದ ಈವರೆಗೆ 32ಮಂದಿ ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ವಿವೇಕ್‌ ಅಲಿಯಾಸ್‌ ಪ್ರಯಾಗ್‌ ಮಾಂಝಿ, ಅನುಜ್‌ ಅಲಿಯಾಸ್‌ ಸಹದೇವ್‌ ಸೊರೇನ್‌ ಸೇರಿದಂತೆ ಪ್ರಮುಖರು ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟಿದ್ದಾರೆ. ಈ ಇಬ್ಬರ ಸುಳಿವು ನೀಡಿದವರಿಗೆ ತಲಾ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು' ಎಂದು ಜಾರ್ಖಂಡ್‌ ಪೊಲೀಸ್‌ ವಕ್ತಾರ ಮೈಕೆಲ್‌ ರಾಜ್‌ ತಿಳಿಸಿದರು.

ಇದೇ ಅವಧಿಯಲ್ಲಿ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries