ವರದಿ ಪ್ರಕಾರ, ಮಂಗಳವಾರದಿಂದ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಝಾನ್ ಕಂಪೆನಿ ಯೋಜನೆ ರೂಪಿಸಿದೆ.
ಇದು ಅಮೆಝಾನ್‌ನ ಒಟ್ಟು 15.5 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಸಣ್ಣ ಪ್ರಮಾಣದ್ದಾದರೂ, ಕಂಪೆನಿಯ ಸುಮಾರು 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 10ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ.
ರಾಯಿಟರ್ಸ್ ಪ್ರಕಾರ, ಅಮೆಝಾನ್ ಕಳೆದ ಎರಡು ವರ್ಷಗಳಲ್ಲಿ ಡಿವೈಸ್‌ಗಳು, ಸಂವಹನ, ಪಾಡ್ಕಾಸ್ಟಿಂಗ್ ಸೇರಿದಂತೆ ಹಲವಾರು ವಲಯಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಕ್ರಮೇಣ ಕಡಿಮೆ ಮಾಡುತ್ತಿದೆ.
Bloomberg ವರದಿ ಪ್ರಕಾರ, ಅಮೆಝಾನ್‌ನ ವಂಡರಿ ಪಾಡ್‌ಕಾಸ್ಟ್ ವಿಭಾಗದಲ್ಲಿ ಇತ್ತೀಚೆಗೆ ಸುಮಾರು 110 ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. 2025ರ ಜುಲೈನಲ್ಲಿ ಕಂಪೆನಿಯು ವೆಬ್ ಸೇವೆಗಳ(AWS) ಕ್ಲೌಡ್ ವಿಭಾಗದಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಮೇ ತಿಂಗಳಲ್ಲಿ ಅದರ ಡಿವೈಸ್ ಮತ್ತು ಸರ್ವೀಸ್ ವಿಭಾಗದಿಂದಲೂ ಸುಮಾರು 100 ಹುದ್ದೆಗಳನ್ನು ಕಡಿತಗೊಳಿಸಿತ್ತು.




