HEALTH TIPS

ಬಂಗಾಳದ 'ಕಾಟಿ ರೋಲ್ಸ್‌ಗೆ' ಜಾಗತಿಕ ಆಹಾರ ಪಟ್ಟಿಯಲ್ಲಿ ಸ್ಥಾನ!

ಜಾಗತಿಕವಾಗಿ ಗುರುತಿಸಲ್ಟಪಟ್ಟ ಅತ್ಯಂತ ರುಚಿಕರವಾದ ಆಹಾರಗಳ ಪಟ್ಟಿಯ ಇತ್ತೀಚಿನ ಶ್ರೇಯಾಂಕವನ್ನು 'ಟೇಸ್ಟ್‌ಅಟ್ಲಾಸ್' ವೆಬ್‌ಸೈಟ್ ಬಿಡುಗಡೆ ಮಾಡಿದೆ. ಕೋಲ್ಕತ್ತದ ವಿಶೇಷ ಆಹಾರವಾಗಿರುವ 'ಕಾಟಿ ರೋಲ್ಸ್‌' ಟಾಪ್‌ಟೆನ್ ರುಚಿಕರ ಆಹಾರಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಗ್ರೀಸ್‌ನ ಗೈರೋಸ್ ಹಾಗೂ ದಕ್ಷಿಣ ಕೋರಿಯಾದ ಸಾಂಗ್‌ಚು ಸ್ಸಂ( Sangchu Ssam) ಇದ್ದು, ಭಾರತದ ಕಾಟಿ ರೋಲ್ಸ್‌ 6ನೇ ಸ್ಥಾನ ಪಡೆದುಕೊಂಡಿದೆ.

1930 ರ ದಶಕದಲ್ಲಿ ನಿಜಾಮರ ರೆಸ್ಟೋರೆಂಟ್‌ಗಳಲ್ಲಿ ಆರಂಭಿಸಿದ ಕಾಟಿ ರೋಲ್ಸ್ ಇಂದಿಗೂ ಕೋಲ್ಕತ್ತದ ನಗರಗಳಲ್ಲಿ ಹೆಚ್ಚು ಬೇಡಿಕೆಯ ಆಹಾರವಾಗಿದೆ ಎಂದು ವರದಿ ತಿಳಿಸಿದೆ. ಇದು ಜಗತ್ತಿನಾದ್ಯಾಂತ ಸಿಗುವ ವಿವಿಧ ಮಾದರಿಯಲ್ಲಿ ಬ್ರೆಡ್ ಅಥವಾ ಚಪಾತಿಯೊಳಗೆ ಬೇಯಿಸಿದ ಮಾಂಸ, ತರಕಾರಿಗಳ ಹೂರಣ ಸೇರಿಸಿ ಸೇವಿಸುವ ಆಹಾರವಾಗಿದೆ.

ಅತ್ಯಂತ ರುಚಿಕರವಾದ ವಿಶ್ವದ ಅಗ್ರ 10 ಆಹಾರಗಳ ಪಟ್ಟಿ

1 ಗ್ರೀಸ್‌ನ 'ಗೈಪ್ರೋಸ್' (Gyros, Greece)

2 ದಕ್ಷಿಣ ಕೊರಿಯಾದ 'ಸಾಂಗ್ಚು ಸ್ಸಾಮ್' (Sangchu Ssam, South Korea)

3 ಟರ್ಕಿಯ 'ಟಂಟುನಿ' (Tantuni, Mersin, Turkiye)

4 ಮೆಕ್ಸಿಕೊದ 'ಎಂಚಿಲಾದಾಸ್ ಸುಯಿಜಾಸ್' (Enchiladas Suizas, Mexico)

5 ಅಮೆರಿಕದ 'ಕಾರ್ನೆ ಅಸದಾ ಬುರ್ರಿಟೋ', 'ಸ್ಯಾನ್ ಡಿಯಾಗೋ' (Carne Asada Burrito, San Diego, USA)

6 ಕೋಲ್ಕತ್ತದ 'ಕಾಟಿ ರೋಲ್ಸ್‌' (Kathi Roll, Kolkata, India)

7 ಮೆಕ್ಸಿಕೊದ 'ಬುರ್ರಿಟೊ' (Burrito, Mexico)

8 ಮೆಕ್ಸಿಕೊದ 'ಎಂಚಿಲಾಡಾಸ್' (Mulita, Mexico)

9 ಮೆಕ್ಸಿಕೊದ 'ಮುಲಿಟಾ' ( Enchiladas Mineras, Mexico )

10 ಮೆಕ್ಸಿಕೊದ ಎಂಚಿಲಾಡಾಸ್ ಮಿನೆರಸ್ ಈ ಆಹಾರಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries