ಹಸಿರು ಮೆಣಸಿನಕಾಯಿ ಖರೀದಿಸಿ ಸಂಗ್ರಹಿಸಿದಾಗ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ಇಲ್ಲದಿದ್ದರೆ, ಅವು ಒಣಗುತ್ತವೆ. ಆದ್ದರಿಂದ ಮೆಣಸಿನಕಾಯಿ ಒಂದು ತಿಂಗಳ ಕಾಲ ಕೆಡದಂತೆ ಅಥವಾ ಕೊಳೆಯದಂತೆ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ಹಸಿರು ಮೆಣಸಿನಕಾಯಿ ಇಲ್ಲದೆ ಅನೇಕ ದಕ್ಷಿಣ ಭಾರತೀಯ ಭಕ್ಷ್ಯಗಳು ಅಪೂರ್ಣ.
ಇನ್ನು ನಾವು ಹಸಿರು ಮೆಣಸಿನಕಾಯಿಗಳನ್ನು ಖರೀದಿಸುವಾಗ ಸ್ವಲ್ಪ ಮುರಿದಿದ್ದರೂ ಸಹ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಅವುಗಳನ್ನು ಖರೀದಿಸಿ ಸಂಗ್ರಹಿಸಿದರೂ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ಇಲ್ಲದಿದ್ದರೆ, ಅವು ಒಣಗುತ್ತವೆ. ಆದ್ದರಿಂದ ಮೆಣಸಿನಕಾಯಿ ಒಂದು ತಿಂಗಳ ಕಾಲ ಕೆಡದಂತೆ ಅಥವಾ ಕೊಳೆಯದಂತೆ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ನೀವು ಮಾಡುವ ಈ ಸಣ್ಣ ತಪ್ಪಿನಿಂದಾಗಿ ಹಸಿರು ಮೆಣಸಿನಕಾಯಿಗಳನ್ನ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರೂ ಬೇಗನೆ ಹಾಳಾಗುತ್ತವೆ. ಆದರೆ ರಹಸ್ಯ ಹಸಿರು ಮೆಣಸಿನಕಾಯಿ ಕಾಂಡದಲ್ಲಿದೆ. ನೀವು ಮೆಣಸಿನಕಾಯಿಗಳನ್ನು ಸಂಗ್ರಹಿಸುವ ಮೊದಲು ತೊಟ್ಟು ಅಥವಾ ಕಾಂಡವನ್ನ ತೆಗೆದುಹಾಕಿ ನಂತರ ಸ್ವಚ್ಛಗೊಳಿಸಿ, ಸಂಗ್ರಹಿಸಬೇಕು. ಆಗ ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ.

ನೀವು ಹಸಿರು ಮೆಣಸಿನಕಾಯಿಗಳನ್ನು ಖರೀದಿಸಿದ ನಂತರ ಒಂದು ತಿಂಗಳವರೆಗೆ ತಾಜಾವಾಗಿಡಲು ಬಯಸಿದರೆ ಮೆಣಸಿನಕಾಯಿಗಳನ್ನು ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ ಮತ್ತು ಒಣಗಿಸಿ. ನಂತರ ಅವುಗಳನ್ನು ಫ್ರಿಜ್‌ನ ತರಕಾರಿ ಟ್ರೇನಲ್ಲಿ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ. ಈ ರೀತಿ ಸಂಗ್ರಹಿಸಿದಾಗ, ಮೆಣಸಿನಕಾಯಿಗಳು ಸುಮಾರು ಒಂದು ತಿಂಗಳವರೆಗೆ ಹಾಳಾಗುವುದಿಲ್ಲ. ನೀವು ಅವುಗಳನ್ನು ಜಿಪ್‌ಲಾಕ್ ಬ್ಯಾಗ್‌ನಲ್ಲಿ ಹಾಕಿ ಮುಚ್ಚಿದಾಗ, ಅವು ಗಾಳಿಯಿಲ್ಲದೆ ಹೆಚ್ಚು ಕಾಲ ಹಾಳಾಗುವುದಿಲ್ಲ.

ನಿಮ್ಮ ಬಳಿ ಜಿಪ್‌ಲಾಕ್ ಬ್ಯಾಗ್ ಇಲ್ಲದಿದ್ರೆ ಚಿಂತಿಸಬೇಡಿ. ನಿಮ್ಮ ಬಳಿ ಜಿಪ್‌ಲಾಕ್ ಬ್ಯಾಗ್ ಇಲ್ಲದಿದ್ರೂ ಪರವಾಗಿಲ್ಲ. ಬದಲಾಗಿ, ವೃತ್ತಪತ್ರಿಕೆ ಬಳಸಿ. ಮೊದಲು ಹಸಿರು ಮೆಣಸಿನಕಾಯಿಗಳಿಂದ ಕಾಂಡಗಳನ್ನು ತೆಗೆದು, ತೊಳೆದು ಸ್ವಚ್ಛಗೊಳಿಸಿ. ಒಣಗಿಸಿ. ನಂತರ ಅವುಗಳನ್ನು ವೃತ್ತಪತ್ರಿಕೆಯಲ್ಲಿ ಸುತ್ತಿ ಫ್ರಿಡ್ಜ್ ಬಾಗಿಲಲ್ಲಿ ಸಂಗ್ರಹಿಸಿ. ನೀವು ಅವುಗಳನ್ನು ಬಟ್ಟೆಯಲ್ಲಿ ಸುತ್ತಿದರೆ ಇನ್ನೂ ಉತ್ತಮ.

ಕೆಲವರು ಹಸಿರು ಮೆಣಸಿನಕಾಯಿಗಳನ್ನು ದೀರ್ಘಕಾಲ ತಾಜಾವಾಗಿರಿಸಲು ಡಬ್ಬಿಗಳಲ್ಲಿ ಸಂಗ್ರಹಿಸುತ್ತಾರೆ. ನೀವು ಅವುಗಳನ್ನು ಹೀಗೆ ಸಂಗ್ರಹಿಸಲು ಬಯಸಿದರೆ ಶೇಖರಣೆಗೆ ಬಳಸುವ ಡಬ್ಬಿಯು ಸ್ವಚ್ಛವಾಗಿರಬೇಕು. ಅದು ಪ್ಲಾಸ್ಟಿಕ್ ಡಬ್ಬಿ ಅಥವಾ ಎವರ್‌ಸಿಲ್ವರ್ ಡಬ್ಬಿ ಯಾವುದೇ ಆಗಿರಲಿ, ತೇವಾಂಶ ರಹಿತವಾಗಿರುವುದು ಬಹಳ ಮುಖ್ಯ. ಒಂದು ವೇಳೆ ನೀವು ಅದನ್ನು ತೇವಾಂಶವಿರುವ ಪಾತ್ರೆಯಲ್ಲಿ ಇಟ್ಟರೆ ಅದು ಕೊಳೆಯುತ್ತದೆ.

ನೀವು ಬಹಳಷ್ಟು ಹಸಿರು ಮೆಣಸಿನಕಾಯಿಗಳನ್ನು ಖರೀದಿಸಿದರೂ ಅವು ಕೆಲವೇ ದಿನಗಳಲ್ಲಿ ಕೆಟ್ಟು ಹೋಗಬಹುದು. ಇದು ಸಂಭವಿಸದಂತೆ ತಡೆಯಲು, ನೀವು ಮಾರುಕಟ್ಟೆಯಿಂದ ಹಸಿರು ಮೆಣಸಿನಕಾಯಿಗಳನ್ನು ಖರೀದಿಸುವಾಗ ಮಾಗಿದ ಹಣ್ಣುಗಳನ್ನು ತರಬೇಡಿ. ಒಂದು ವೇಳೆ ಹೆಚ್ಚು ಕಾಯಿ ತಂದರೂ ಒಂದೇ ಕಡೆ ಹೆಚ್ಚಿಡದೆ ಪ್ರತ್ಯೇಕ ಮಾಡಿಡಿ.

