ಕುಂಬಳೆ: ವರ್ತಮಾನ ಕಾಲದ ದೈವಾರಾಧನೆ ಮತ್ತು ದೇವತಾರಾಧನೆಯ ಜೊತೆಯಲ್ಲಿ ಸಾಮಾಜಿಕ ಜೀವನದಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತರೂ ಅದರಲ್ಲೂ ಮುಖ್ಯವಾಗಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಮೊಗೇರ ಜನಾಂಗದವರು ಆರ್ಥಿಕವಾಗಿ ಬಲಿಷ್ಠವಾಗಲು ಚಿಂತನೆ ನಡೆಸಬೇಕಾದ ಕಾಲವು ಇನ್ನೂ ಮೀರಿ ಹೋಗಿಲ್ಲವೆಂದು ಅದರ ಬಗ್ಗೆ ಮೊಗೇರ ಜನಾಂಗವು ಪ್ರಾಮಾಣಿಕವಾಗಿ ಪರಿಶ್ರಮಿಸಬೇಕೆಂದು ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ್ ಆದೂರು ಅಭಿಪ್ರಾಯಪಟ್ಟರು.
ಮೊಗೇರ ಸಮಾಜವು ಜನಸಂಖ್ಯಾ ರೀತಿಯಲ್ಲಿ ಸಂಪನ್ನಗೊಂಡಿದ್ದರೂ ಒಗ್ಗಟ್ಟಿನಲ್ಲಿ ದುರ್ಬಲರೆಂದೂ ಇದರ ಬಗ್ಗೆ ಪ್ರಸ್ತುತ ಜನ ಸಮೂಹವು ಚಿಂತನೆ ನಡೆಸುವ ಅನಿವಾರ್ಯವೆಂದೂ ಅವರು ಕರೆ ನೀಡಿದರು.
ಕಿದೂರು ಕುಂಟಂಗೇರಡ್ಕದಲ್ಲಿ ಧರ್ಮದೇವ ಬ್ರಹ್ಮ ಮೊಗೇರ ದೈವ ಪಾತ್ರಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಮೊಗೇರ ದೈವರಾಧನೆಯ ನೆಲೆ ಬೆಲೆ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ದೈವ ಪಾತ್ರಿ, ಜಿಲ್ಲಾಧ್ಯಕ್ಷ ಕೊರಗಪ್ಪ ಬೆಳ್ಳಿಗೆ, ವಸಂತ ಅಜಕ್ಕೋಡು, ರಾಧಾಕೃಷ್ಣ ಉಳಿಯತಡ್ಕ, ರಾಮಪ್ಪ ಮಂಜೇಶ್ವರ, ಚಂದ್ರ ಕಾಜೂರು, ಗಂಗಾಧರ ಗೋಳಿಯಡ್ಕ, ಪಂಚಾಯತಿ ಸದಸ್ಯ ರವಿರಾಜ್ ಕಿದೂರು ಮುಂತಾದವರು ಉಪಸ್ಥಿತರಿದ್ದರು.

.jpg)
