ಕಾಸರಗೋಡು: ಮನುಷ್ಯ-ವನ್ಯಜೀವಿ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆಯು ಹಾವು ಹಿಡಿಯುವ ಕುರಿತು ಒಂದು ದಿನದ ತರಬೇತಿಯನ್ನು ಆಯೋಜಿಸುತ್ತಿದೆ. ಜನರ ಜೀವ ಮತ್ತು ಆಸ್ತಿಗೆ ಬೆದರಿಕೆಯಾಗಿ ಜನವಾಸ ಸ್ಥಳಗಳಿಗೆ ಪ್ರವೇಶಿಸುವ ಹಾವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಿಡಿದು ಸುರಕ್ಷಿತವಾಗಿ ಅವುಗಳ ಆವಾಸಸ್ಥಳಗಳಿಗೆ ಬಿಡಲು ಈ ತರಬೇತಿಯನ್ನು ನಡೆಸಲಾಗುತ್ತದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಸ್ವಯಂಸೇವಕರಿಗೆ ತರಬೇತಿ ನೀಡಿ ಪ್ರಮಾಣೀಕರಿಸಲಾಗುತ್ತದೆ.
ಸಾರ್ವಜನಿಕರಿಗೆ ಹಾವು ಕಡಿತವನ್ನು ತಪ್ಪಿಸಲು ಜಾಗೃತಿ ತರಗತಿಗಳನ್ನು ತೆಗೆದುಕೊಳ್ಳಲು ವಿಶೇಷ ತರಬೇತಿಯನ್ನು ಸಹ ನೀಡಲಾಗುವುದು. ಅರಣ್ಯ ಇಲಾಖೆಯ 'ಸರ್ಪ' ಅಪ್ಲಿಕೇಶನ್ ಮೂಲಕ ಸ್ವೀಕರಿಸಿದ ದೂರುಗಳಲ್ಲಿ ಜನವಾಸ ಸ್ಥಳಗಳಿಂದ ಹಾವುಗಳನ್ನು ತೆಗೆದುಹಾಕಲು ಸ್ವಯಂಸೇವಕರನ್ನು ನಿಯೋಜಿಸಲು ತರಬೇತಿಯನ್ನು ನೀಡಲಾಗುತ್ತಿದೆ.
ಆಸಕ್ತರು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್ 31 ರೊಳಗೆ rfosfkannur@gmail .com ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಫೆÇೀನ್-8547603827, 8547603826 ನಲ್ಲಿ ಸಂಪರ್ಕಿಸಬಹುದು.

