ಮಂಜೇಶ್ವರ: ಸಾಲ ಬಾಧೆಯಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ದಂಪತಿಗಳು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ತಡರಾತ್ರಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಮಂಜೇಶ್ವರ ಕಡಂಬಾರು ಜಂಭದ ಪದವು ಅಯ್ಯಪ್ಪ ಮಂದಿರದ ಎದುರಿನಲ್ಲಿ ವಾಸವಾಗಿರುವ ಅಜಿತ್ ಹಾಗೂ ಅವರ ಪತ್ನಿ ಶ್ವೇತಾ ವಿಷ ಸೇವಿಸಿ ಆತ್ಮಹತ್ಯೆಗೈದ ದಂಪತಿಗಳು.
ಶ್ವೇತಾ ಶಾಲೆಯೊಂದರಲ್ಲಿ ಅದ್ಯಾಪಿಕೆಯಾಗಿದ್ದರು.
ಇವರಿಗೆ ಮೂರರ ಹರೆಯದ ಮಗುವೊಂದು ಇದ್ದು ಈ ಮಗುವನ್ನು ಅಜಿತ್ ನ ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ಕೀಟನಾಶಕ ಸೇವಿಸಿ ಅತ್ಮಹತ್ಯೆಗೈದಿದ್ದಾರೆ.




