ತಿರುವನಂತಪುರಂ: ಸರ್ಕಾರಿ ವಾಹನಗಳಿಗೆ ಕೆ.ಎಲ್.-90 ಸರಣಿಯಲ್ಲಿ ನೋಂದಣಿ ಸಂಖ್ಯೆಗಳನ್ನು ಒದಗಿಸಲು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರಿ ವಾಹನಗಳನ್ನು ಕೆ.ಎಲ್. 90 ಮತ್ತು ಕೆ.ಎಲ್.90 ಡಿ ಸರಣಿಯಲ್ಲಿ ನೋಂದಾಯಿಸಲಾಗುತ್ತದೆ.
ಕೆಲವು ಸಂಖ್ಯೆಗಳನ್ನು ನಿರ್ದಿಷ್ಟವಾಗಿ ಮಂತ್ರಿಗಳು, ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳು ಮತ್ತು ಪೆÇ್ರೀಟೋಕಾಲ್ ವಾಹನಗಳಿಗೆ ಕಾಯ್ದಿರಿಸಲಾಗುತ್ತದೆ.
ರಾಜ್ಯ ಸರ್ಕಾರ ಮತ್ತು ಇಲಾಖೆಯ ವಾಹನಗಳನ್ನು ಕೆ.ಎಲ್.-90 ಸರಣಿಯಲ್ಲಿ ನೋಂದಾಯಿಸಲಾಗುತ್ತದೆ, ನಂತರ ಕೆ.ಎಲ್-90 ಡಿ ಸರಣಿಯಲ್ಲಿ ನೋಂದಾಯಿಸಲಾಗುತ್ತದೆ.
ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕೆ.ಎಲ್ 90 ಎ, ನಂತರ ಕೆ.ಎಲ್ 90 ಇ ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತದೆ.
ಸ್ಥಳೀಯ ಸರ್ಕಾರಿ ವಾಹನಗಳನ್ನು ಕೆ.ಎಲ್ 90ಬಿ ಮತ್ತು ಕೆ.ಎಲ್ 90 ಎಫ್ ನೋಂದಣಿಗಳಲ್ಲಿ ನೋಂದಾಯಿಸಲಾಗುತ್ತದೆ.
ಅರೆ ಸರ್ಕಾರಿ ಸಂಸ್ಥೆಗಳು, ಮಂಡಳಿಗಳು, ವಿವಿಧ ನಿಗಮಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕೆ.ಎಲ್ 90 ಸಿ ನೀಡಲಾಗುವುದು ಮತ್ತು ಆ ಸರಣಿಯಲ್ಲಿ ನೋಂದಣಿ ಮಾಡಿದ ನಂತರ, ಕೆ.ಎಲ್ 90 ಜಿ ಸರಣಿಯಲ್ಲಿ ನೋಂದಣಿಯನ್ನು ನೀಡಲಾಗುತ್ತದೆ.
ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ಕೆ.ಎಲ್ 15 ಸರಣಿ ಮುಂದುವರಿಯುತ್ತದೆ.
ಮೋಟಾರು ವಾಹನ ಇಲಾಖೆ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಹೊಸ ಬದಲಾವಣೆಯನ್ನು ಜಾರಿಗೆ ತರಲಾಗುವುದು.
ಮೇಲಿನ ವಾಹನಗಳನ್ನು ಯಾವುದೇ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಮಾರಾಟ ಮಾಡಿದಾಗ, ವಾಹನ ನೋಂದಣಿಯನ್ನು ಬದಲಾಯಿಸುವುದು ಕಡ್ಡಾಯ ಷರತ್ತು ವಿಧಿಸಲಾಗಿದೆ.




