ಮಂಜೇಶ್ವರ: ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವುದರೊಂದಿಗೆ ಪ್ರತಿಭೆಗಳ ಅನಾವರಣಕ್ಕೆ ಸೃಜನೋತ್ಸವ ಸೂಕ್ತ ವೇದಿಕೆಯನ್ನು ನೀಡುತ್ತದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಮಕ್ಕಳ ಬೆಳವಣಿಗೆಗೆ ಉತ್ತೇಜನ ನೀಡುವ ಗ್ರಂಥಾಲಯದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿ ಕಮಲಾಕ್ಷ ಡಿ ರವರು ತಿಳಿಸಿದರು.
ಅವರು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಸಹಕಾರದಲ್ಲಿ ವರ್ಕಾಡಿ ಪಂಚಾಯತಿ ನೇತೃತ್ವ ಸಮಿತಿಯ ಆಶ್ರಯದಲ್ಲಿ ಜರಗಿದ ವರ್ಕಾಡಿ ಪಂಚಾಯತ್ ಮಟ್ಟದ ಸೃಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಕಾರ್ಯಕಾರೀ ಸಮಿತಿ ಸದಸ್ಯ ಕಿಶೋರ್ ಕುಮಾರ್ ಪಾವಳ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕುಳೂರು ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಟೀಚರ್, ಮುಖ್ಯೋಪಾಧ್ಯಾಯ ಮಜೀದ್ ಮಾಸ್ತರ್, ಸೌಮ್ಯ ಟೀಚರ್, ರುಕ್ಮಿಣಿ,ಚೇತನ್ ಪಾವಳ ಮೊದಲಾದವರು ಉಪಸ್ಥಿತರಿದ್ದರು.ನೇತೃತ್ವ ಸಮಿತಿ ಸಂಚಾಲಕರಾದ ವಿಜಯ ಮಾಸ್ತರ್ ಪಾವಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಶೋಕ್ ಕೊಡ್ಲಮೊಗರು ವಂದಿಸಿದರು.
ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಧರಯ್ಯ ಮರಿಕಾಪುರ ಅವರು ಬಹುಮಾನ ವಿತರಣೆ ಮಾಡಿದರು. ವಿಜೇತರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

.jpg)

