HEALTH TIPS

ಪೌಷ್ಟಿಕಾಂಶ ಜಾಗೃತಿ ಯೋಜನೆ- ರಾಜ್ಯಮಟ್ಟದ ಪ್ರಶಂಸೆಗೆ ಪಾತ್ರವಾದ ಕಾಸರಗೋಡಿನ 'ಪೋಷಣ್ ಮಾ' ಚಟುವಟಿಕೆ

ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆಯು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಪೌಷ್ಟಿಕಾಂಶ ಜಾಗೃತಿ ಯೋಜನೆಯ ಕಾಸರಗೋಡು ಜಿಲ್ಲೆಯ ಚಟುವಟಿಕೆ ರಾಜ್ಯ ಮಟ್ಟದ ಪ್ರಶಂಸೆಗೆ  ಪಾತ್ರವಾಗುತ್ತಿದೆ.

'ಪೋಷಣ್ ಮಾ' ಎಂಬುದು ಸಾಮಾಜಿಕ ನ್ಯಾಯ ಇಲಾಖೆಯ ಒಂದು ಯೋಜನೆಯಾಗಿದ್ದು, ಈ ಮೂಲಕ ಜನರಿಗೆ ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಲು ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ಪೌಷ್ಟಿಕಾಂಶವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ನೀಡಿರುವ 161760 ಚಟುವಟಿಕೆಗಳ ಗುರಿಯನ್ನು ಮೀರಿ, ಕಾಸರಗೋಡು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 169,352 ಚಟುವಟಿಕೆಗಳನ್ನು ನಡೆಸುವ ಮೂಲಕ ಈ ಸಾಧನೆ ನಡೆಸಿದೆ.


'ಪೋಷಣ್ ಮಾ':

ಆರು ವರ್ಷದೊಳಗಿನಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶವನ್ನು ಖಾತ್ರಿಪಡಿಸುವ ಗುರಿಯೊಂದಿಗೆ 2018 ರಲ್ಲಿ ಯೋಜನೆ ಆರಂಭಿಸಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ಪೋಷಣ್ ಮಾ ಯೋಜನೆಯ ಮೂಲಕ 'ಪೌಷ್ಟಿಕಾಂಶ ಮಾಸ'ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16 ರವರೆಗೆ ನಡೆದ ಪೌಷ್ಟಿಕಾಂಶ ಸಪ್ತಾಹವು ಬೊಜ್ಜುನಿರ್ವಹಣೆ, ಮಕ್ಕಳ ಆರೈಕೆ ಮತ್ತು ಶಿಶು ಪೆÇೀಷಣೆಯ ಮೇಲೆ ಮಕ್ಕಳಿಗೆ ಆಹಾರ ನೀಡುವ ವಿಧಾನ, ಪುರುಷರಿಗೂ ಪೌಷ್ಟಿಕಾಂಶ ಖಾತ್ರಿಪಡಿಸುವುದು ಮತ್ತು ಮಕ್ಕಳ ಆರೈಕೆಯಲ್ಲಿ ಪುರುಷರು ಮತ್ತು ಮಹಿಳೆಯರ ಸಮಾನ ಭಾಗವಹಿಸುವಿಕೆ ಮುಂತಾದ ವಿಷಯಗಳ ಕುರಿತು ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ ಗಮನಸೆಳೆದ ಚಟುವಟಿಕೆ:

ಜಿಲ್ಲೆಯ 12 ಐಸಿಡಿಎಸ್ ಕಚೇರಿಗಳ ನೇತೃತ್ವದಲ್ಲಿ 1348 ಅಂಗನವಾಡಿಗಳಲ್ಲಿ ಪೋಷಣ್ ಮಾ  ಚಟುವಟಿಕೆ ನಡೆಸಲಾಗಿದ್ದು,  ಪೆÇೀಷಣ್ ಮಾಸ ಆಚರಣೆಯ ಭಾಗವಾಗಿ, ವಿವಿಧ ಸಿಡಿಪಿಓಗಳ ಜತೆ ಸಮಾಲೋಚಿಸಿ, ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.  ಐದು ವಿಷಯಗಳನ್ನು ಒಳಗೊಂಡಂತೆ ಒಂದು ತಿಂಗಳ ಚಟುವಟಿಕೆಯುಳ್ಳ ಕ್ಯಾಲೆಂಡರ್   ಸಿದ್ಧಪಡಿಸಿ, ಚಟುವಟಿಕೆ ಪೂರ್ತಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಪೌಷ್ಟಿಕಾಂಶ ಸಮಿತಿಯು ಪೆÇೀಶನ್ ಮಾ ಚಟುವಟಿಕೆಗಳಿಗಾಗಿ 2,50,000 ರೂ.ಗಳನ್ನು ಒದಗಿಸಿದ್ದು,  ಇದರಲ್ಲಿ 12 ಐಸಿಡಿಎಸ್ ಯೋಜನೆಗಳಿಗಾಗಿ ತಲಾ 15,000 ರೂ.ಗಳನ್ನು ಹಂಚಿಕೆ ಮಾಡಲಾಗಿದೆ. 'ಪೆÇೀಶನ್ ಮಾ'ದ ಜಿಲ್ಲಾ ಮಟ್ಟದ ಚಟುವಟಿಕೆಗಳಿಗೆ 70,000 ರೂ.ಗಳನ್ನು ಒದಗಿಸಲಾಗಿದೆ. 

ಐಸಿಡಿಎಸ್ ಕೇಂದ್ರಿತ ಚಟುವಟಿಕೆ:

ಐಸಿಡಿಎಸ್ ಯೋಜನಾ ಮಟ್ಟದ ಚಟುವಟಿಕೆಗಳು ಜಿಲ್ಲೆಯ 12 ಐಸಿಡಿಎಸ್ ಯೋಜನೆಗಳ ಮೇಲೆ ಕೇಂದ್ರೀಕರಿಸಿ ವಿವಿಧ ಜಾಗೃತಿ ಚಟುವಟಿಕೆಗಳು, ಪ್ರದರ್ಶನ ವಿಚಾರ ಸಂಕಿರಣ, ರಸಪ್ರಶ್ನೆ ಸ್ಪರ್ಧೆ, ಶಾಲಾ ಮಟ್ಟದಲ್ಲಿ ರ್ಯಾಲಿ, ವಿವಿಧ ಕಾರ್ಯಾಗಾರ, ಪೆÇೀಸ್ಟರ್ ಅಭಿಯಾನ,ಸಹಿ ಅಭಿಯಾನ, ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರಕ್ತಹೀನತೆ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗಣನೀಯ ಸಾಧನೆ ನಡೆಸಿದೆ. ಜಿಲ್ಲೆಯ 1348 ಅಂಗನವಾಡಿಗಳಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಜಾಗೃತಿ ತರಗತಿ, ಬಿಎಂಐ ಸ್ಕ್ರೀನಿಂಗ್, ಅಡುಗೆ ಸ್ಪರ್ಧೆಗಳು, ಆರು ವರ್ಷದೊಳಗಿನ ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.    ಎಲ್ಲಾ 1348 ಅಂಗನವಾಡಿಗಳಲ್ಲಿ ಪ್ರತಿದಿನ ಐಸಿಡಿಎಸ್ ನೇತೃತ್ವದಲ್ಲಿ ಐದು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಐಸಿಡಿಎಸ್ ಮೇಲ್ವಿಚಾರಕರು ಮತ್ತು ಎನ್‍ವಿಎಂ ಬ್ಲಾಕ್ ಸಂಯೋಜಕರು ಖಚಿತಪಡಿಸಿಕೊಳ್ಳುತ್ತಿದ್ದಾರೆ. 

ಜಿಲ್ಲೆಗೆ ಮನ್ನಣೆ:

ದೇಶದಲ್ಲಿ ಕೇರಳದಲ್ಲಿ 2920614 ಪೆÇೀಷಣ್ ಮಾ ಚಟುವಟಿಕೆಗಳನ್ನು ನಡೆಸಲಾಗಿದೆ. ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಕಾಸರಗೋಡು ಜಿಲ್ಲೆ ತನ್ನ ಅತ್ಯುತ್ತಮ ಕಾರ್ಯಚಟುವಟಿಕೆ ಮೂಲಕ ಇಂದು ಪ್ರಥಮ ಸ್ಥಾನ ಗಳಿಸಲಾಗಿದೆ. ಇದು ವಿವಿಧ ಇಲಾಖೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರಯತ್ನಗಳಿಗೆ ದೊರೆತ ಮನ್ನಣೆಯಾಗಿದೆ ಎಂದು ಐಸಿಡಿಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಜಿಜಿ ಜಾನ್ ತಿಳಿಸುತ್ತಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries