HEALTH TIPS

ಅಕಸ್ಮಾತ್ ಫೋನ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು?..ಇಲ್ಲಿದೆ ಸಂಪೂರ್ಣ ಮಾಹಿತಿ!

 ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಕೇವಲ ಸಂವಹನ ಸಾಧನವಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಬ್ಯಾಂಕಿಂಗ್ ವ್ಯವಹಾರಗಳಿಂದ ಹಿಡಿದು ವೈಯಕ್ತಿಕ ಫೋಟೋಗಳು, ಪ್ರಮುಖ ದಾಖಲೆಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳವರೆಗಿನ ನಮ್ಮ ಎಲ್ಲ ಮಾಹಿತಿಗಳು ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹವಾಗಿರುತ್ತವೆ. ಒಂದು ವೇಳೆ ಮೊಬೈಲ್ ಕಳೆದುಹೋದರೆ, ಹಣಕಾಸಿನ ನಷ್ಟದ ಜೊತೆಗೆ ವೈಯಕ್ತಿಕ ಮಾಹಿತಿಯು ದುರ್ಬಳಕೆಯಾಗುವ ಅಪಾಯ ಹೆಚ್ಚಿರುತ್ತದೆ. ಈ ವೇಳೆ ನಾವು ಮೊದಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.  


1. ಮೊದಲು ಸಿಮ್ ಬ್ಲಾಕ್ ಮಾಡಿ. ನಿಮ್ಮ ಟೆಲಿಕಾಂ ಸಂಸ್ಥೆಗೆ ಕರೆ ಮಾಡಿ ನಿಮ್ಮ ಮೊಬೈಲ್ ಕಳೆದುಹೋಗಿರುವ ಬಗ್ಗೆ ಮಾಹಿತಿ ನೀಡಿ. ಸಿಬ್ಬಂದಿ ಕೇಳುವ ದಾಖಲೆ ಮಾಹಿತಿಗಳನ್ನು ಒದಗಿಸಿ. ಇದರಿಂದ ನೀವು ತತಕ್ಷಣ ನಿಮ್ಮ ಸಿಮ್ ಅನ್ನು ಬ್ಲಾಕ್ ಮಾಡಬಹುದು. ಆದರೆ, ನಿಮ್ಮ ಕೆಲಸ ಇಷ್ಟೇ ಅಲ್ಲ.! ನಂತರ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಏಕೆಂದರೆ, ನಿಮ್ಮ ಫೋನ್ ಬಳಸುವ ಮೂಲಕ ಯಾರಾದರೂ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು.
ನಿಮ್ಮ ಮೊಬೈಲ್‌ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯ ದುರ್ಬಳಕೆಯ ಜೊತೆಗೆ ಅಪರಾಧ ಪ್ರಕರಣಗಳನ್ನು ನಡೆಸಬಹುದು. ಹಾಗಾಗಿ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ದೂರು ಸಲ್ಲಿಸುವ ವ್ಯವಸ್ಥೆಯೂ ಇದೆ. ದೂರು ನೀಡುವಾಗ ಫೋನ್‌ನ ಬ್ರ್ಯಾಂಡ್, ಮಾದರಿ ಮತ್ತು IMEI ಸಂಖ್ಯೆ ತಪ್ಪದೆ ನಮೂದಿಸಿ. ದೂರು ದಾಖಲಾದ ನಂತರ ನೀಡುವ FIR ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

2. ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿ. ಇದಾದ ನಂತರ, ಟೆಲಿಕಮ್ಯುನಿಕೇಷನ್ ಇಲಾಖೆ (DoT) ಆರಂಭಿಸಿರುವ CEIR ಪೋರ್ಟಲ್ ತೆರೆಯಿರಿ. ಈ ಪೋರ್ಟಲ್ ಮೂಲಕ ನೀವು ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡಬಹುದು.CEIR ಪೋರ್ಟಲ್ ಮೂಲಕ ಫೋನ್ ಬ್ಲಾಕ್ ಮಾಡುವ ವಿಧಾನ ಹೀಗಿದೆ: sancharsaathi.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. "Block Your Lost/Stolen Mobile" ಆಯ್ಕೆ ಮಾಡಿ. ಫಾರ್ಮ್‌ನಲ್ಲಿ ಕಳೆದುಹೋದ ಫೋನ್ ಸಂಖ್ಯೆ, ಹೊಸ ಸಂಖ್ಯೆ, IMEI ಸಂಖ್ಯೆ ಮತ್ತು FIR ವಿವರಗಳನ್ನು ನಮೂದಿಸಿ. FIR ಪ್ರತಿ ಹಾಗೂ ನಿಮ್ಮ ಗುರುತು ಪತ್ರವನ್ನು ಅಪ್ಲೋಡ್ ಮಾಡಿ. ಫಾರ್ಮ್ ಸಲ್ಲಿಸಿದ ನಂತರ ನಿಮಗೆ ಒಂದು ರಿಕವೆಸ್ಟ್ ಐಡಿ (Request ID) ಸಿಗುತ್ತದೆ. ಇದರ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ 24 ಗಂಟೆಗಳೊಳಗೆ ನಿಮ್ಮ ಫೋನ್‌ನ IMEI ಬ್ಲಾಕ್ ಆಗುತ್ತದೆ. ಹೀಗಾಗಿ ಆ ಫೋನ್‌ಗೆ ಯಾರು ಕೂಡ ಬೇರೆ ಸಿಮ್ ಹಾಕಿ ಬಳಸಲು ಸಾಧ್ಯವಾಗುವುದಿಲ್ಲ.

3. IMEI ಸಂಖ್ಯೆ ತೆರೆಯುವುದು ಹೇಗೆ? IMEI (International Mobile Equipment Identity) ಸಂಖ್ಯೆಯು ಮೊಬೈಲ್ ಕಳೆದುಹೋದಾಗ ಅದನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುವುದುಸಂಖ್ಯೆ. ಇದು ಪ್ರತಿಯೊಂದು ಫೋನ್‌ಗೂ ಇರುವ 15-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಮೊಬೈಲ್‌ನ "ಡಿಜಿಟಲ್ ಫಿಂಗರ್‌ಪ್ರಿಂಟ್" ಎಂದೂ ಕರೆಯಲಾಗುತ್ತದೆ. ನೀವು ಸಿಮ್ ಕಾರ್ಡ್ ಬದಲಾಯಿಸಿದರೂ ಈ ಸಂಖ್ಯೆ ಹಾಗೆಯೇ ಇರುತ್ತದೆ. ನಿಮ್ಮ ಮೊಬೈಲ್‌ನ IMEI ಸಂಖ್ಯೆ ತಿಳಿಯಲು ಮೂರು ಸುಲಭ ಮಾರ್ಗಗಳಿವೆ: ಮೊಬೈಲ್ ಬಾಕ್ಸ್‌ನಲ್ಲಿ ಅಥವಾ ಬಿಲ್‌ನಲ್ಲಿ ನೋಡುವುದು. ನಿಮ್ಮ ಫೋನ್‌ನಲ್ಲಿ *#06# ಎಂದು ಡಯಲ್ ಮಾಡುವುದು. ಈ ಸಂಖ್ಯೆಯನ್ನು ಸುರಕ್ಷಿತ ಸ್ಥಳದಲ್ಲಿ ಬರೆದಿಟ್ಟುಕೊಳ್ಳುವುದು ಯಾವಾಗಲೂ ಒಳ್ಳೆಯದು. ನಿಮ್ಮ ಮೊಬೈಲ್ ಫೋನ್ ಕಳೆದುಹೋದ ಕೂಡಲೇ ತಕ್ಷಣ ಈ ಮೇಲಿನ ಹಂತಗಳನ್ನು ಅನುಸರಿಸುವುದು ಅತಿ ಮುಖ್ಯ.

4. CEIR ಮತ್ತು ಫೋನ್ ಪತ್ತೆಹಚ್ಚುವಿಕೆ CEIR ಪೋರ್ಟಲ್ ಫೋನ್ ಬ್ಲಾಕ್ ಮಾಡಲು ಮಾತ್ರವಲ್ಲದೆ, ಕಳೆದುಹೋದ ಫೋನ್ ಅನ್ನು ಪತ್ತೆಹಚ್ಚಲೂ ನೆರವಾಗುತ್ತದೆ. ಒಂದು ವೇಳೆ ಬ್ಲಾಕ್ ಆದ ಫೋನ್ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಿಸಿದರೆ ಅದರ ಸ್ಥಳವನ್ನು ಟ್ರ್ಯಾಕ್ ಮಾಡಬಹುದು. ಈ ಮಾಹಿತಿಯನ್ನು ಪೊಲೀಸ್ ಇಲಾಖೆ ಬಳಸಿಕೊಂಡು ಫೋನ್ ಮರಳಿ ಪಡೆಯಲು ಪ್ರಯತ್ನಿಸುತ್ತದೆ. ಸರಿಯಾದ ಸಮಯದಲ್ಲಿ ಈ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಕಳೆದುಹೋದ ಫೋನ್ ಅನ್ನು ನೀವು ಸುರಕ್ಷಿತವಾಗಿ ಬ್ಲಾಕ್ ಮಾಡಬಹುದು ಮತ್ತು ಅದನ್ನು ಪತ್ತೆಹಚ್ಚುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries