ಕಣ್ಣೂರು: ಶ್ರೀಕಂಠಪುರಂನ ಚೆಗಲದ ಕಾಕನ್ನಂಪರದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಮೃತರು ಅನ್ಯ ರಾಜ್ಯಗಳ ಕಾರ್ಮಿಕರು. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಕಾರ್ಮಿಕನನ್ನು ಕಣ್ಣೂರಿನ ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ನಿನ್ನೆ ಮಧ್ಯಾಹ್ನ 2:30 ರ ಸುಮಾರಿಗೆ ಅವಘಡ ಸಂಭವಿಸಿದೆ. ಚೆಗಲ ಪಂಚಾಯತ್‍ನ ಕಾಕನ್ನಂಪರದಲ್ಲಿರುವ ಕೆಂಪು ಕಲ್ಲು ಕ್ವಾರಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಅವರನ್ನು ತಕ್ಷಣ ಶ್ರೀಕಂಠಪುರಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಇಬ್ಬರ ಜೀವವನ್ನೂ ಉಳಿಸಲಾಗಲಿಲ್ಲ. ಮೃತರು ಅಸ್ಸಾಂ ಮತ್ತು ಒಡಿಶಾ ಮೂಲದವರು.

