ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಂತರ ತಲೆಮರೆಸಿಕೊಂಡಿದ್ದ ಆರೋಪಿ ಚೆರ್ಕಳ ಬೇರ್ಕಹೌಸ್ ನಿವಾಸಿ ಕುಞÂಮಾಹಿನ್ ಅಶ್ರಫ್ ಕೆ.ಕೆ ಎಂಬಾತನನ್ನು ಕಾಸರಗೋಡು ಮಹಿಳಾ ಠಾಣೆ ಪೊಲೀಸರು ಮೂರು ವರ್ಷಗಳ ನಂತರ ಬಂಧಿಸಿದ್ದಾರೆ. ಆರೋಪಿ ವಿರುದ್ಧ 2022ರಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ನಂತರ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ಲುಕೌಟ್ ನೋಟೀಸು ಜಾರಿಗೊಳಿಸಲಾಗಿತ್ತು.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ನಿರ್ದೇಶ ಪ್ರಕಾರ ಎಎಸ್‍ಪಿ ಡಾ. ನಂದಗೋಪಾಲ್ ಅವರ ಮೇಲ್ನೋಟದಲ್ಲಿ ಮಹಿಳಾ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಜಿತಾ ಕೆ ನೇತೃತ್ವದ ಪೊಲೀಸರ ತಂಡ ಚೆಂಗಳದಿಂದ ಬಂಧಿಸಿದೆ.

