ಪತ್ತನಂತಿಟ್ಟ: ಶಬರಿಮಲೆಯಿಂದ ದುರಸ್ಥಿಗಾಗಿ ಕೊಂಡೊಯ್ಯಲಾಗಿದ್ದ ಚಿನ್ನದ ಆಭರಣಗಳನ್ನು ಬೆಂಗಳೂರಿಗೆ ತರಲಾಗಿದೆ ಎಂದು ಜಾಗೃತ ದಳ ಪತ್ತೆ ಮಾಡಿದೆ. ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ಚಿನ್ನದ ತಟ್ಟೆ ತರಲಾಗಿತ್ತೆಂದು ತಡವಾಗಿ ಪತ್ತೆಹಚ್ಚಲಾಗಿದೆ. ಈ ಘಟನೆ 2019 ರಲ್ಲಿ ನಡೆದಿತ್ತು.
ಉಣ್ಣಿಕೃಷ್ಣನ್ ಪೋತ್ತಿ ಬೆಂಗಳೂರಿನ ಈ ದೇವಸ್ಥಾನದ ಹಿಂದಿನ ಅರ್ಚಕರಾಗಿದ್ದರು. ದೇವಾಲಯದ ಬಾಗಿಲು ಎಂದು ಕರೆಯಲ್ಪಡುವ ತಟ್ಟೆಯನ್ನು ಬೆಂಗಳೂರಿನ ಅಯ್ಯಪ್ಪ ದೇವಸ್ಥಾನಕ್ಕೆ ತರಲಾಗಿತ್ತೆಂದು ದೇವಾಲಯದ ಅಧಿಕೃತರು ನಿನ್ನೆ ಮಾಧ್ಯಮಗಳಿಹೆ ಮಾಹಿತಿ ನೀಡಿದರು.
ದೇವಾಲಯದಲ್ಲಿ ಪೂಜೆ ನಡೆಸಲಾಯಿತು ಮತ್ತು ಭಕ್ತರು ದರ್ಶನ ಪಡೆಯಲು ಸೌಲಭ್ಯಗಳನ್ನು ಸಹ ಒದಗಿಸಲಾಗಿತ್ತು. ಉಣ್ಣಿಕೃಷ್ಣನ್ ಪೋತ್ತಿ ಕೈಗಾರಿಕೋದ್ಯಮಿ ರಮೇಶ್ ಅವರ ಸಹಯೋಗದೊಂದಿಗೆ ಬೆಂಗಳೂರಿಗೆ ಚಿನ್ನದ ತಟ್ಟೆ ತಂದಿದ್ದರು. ಇಲ್ಲಿನ ದೇವಾಲಯದಲ್ಲಿ ಪೂಜೆಗಳನ್ನು ಮಾಡಿದ ನಂತರ, ಅದನ್ನು ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿದ್ದರು ಎಂದು ಅಧಿಕೃತರು ತಿಳಿಸಿದ್ದಾರೆ. ಉಣ್ಣಿಕೃಷ್ಣನ್ ಪೋತ್ತಿ ಅವರನ್ನು 2004 ರಲ್ಲಿ ದೇವಸ್ಥಾನದಿಂದ ಹೊರಹಾಕಲಾಗಿತ್ತು.




