ಕೋಝಿಕೋಡ್: ಪೋಲೀಸರ ಥಳಿತದಿಂದ ಮೂಗಿಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂಸದ ಶಾಫಿ ಪರಂಬಿಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಶಾಫಿ ಅವರ ಮೂಗಿನ ಎಡ ಮತ್ತು ಬಲ ಮೂಳೆಗಳು ಮುರಿದಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮೂರು ದಿನಗಳ ಕಾಲ ಕೋಝಿಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಶಾಫಿ ಅವರಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಆಸ್ಪತ್ರೆಗೆ ಮರಳಲಿದ್ದಾರೆ.
ಪೆರಾಂಬ್ರಾದಲ್ಲಿ ಪೋಲೀಸ್ ಲಾಠಿಚಾರ್ಜ್ ಸಮಯದಲ್ಲಿ ಶಾಫಿ ಪರಂಬಿಲ್ ಗಾಯಗೊಂಡಿದ್ದರು. ಯುಡಿಎಫ್-ಸಿಪಿಎಂ ಪ್ರತಿಭಟನಾ ಮೆರವಣಿಗೆ ವೇಳೆ ಘರ್ಷಣೆ ನಡೆದಾಗ ಸಂಸದರು ಗಾಯಗೊಂಡರು ಮತ್ತು ಪೋಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ಬಳಸಿದ್ದರು.




