ಕಾಸರಗೋಡು : ಡಾ.ಲಲಿತಾ ಎಸ್.ಎನ್.ಭಟ್ ಅವರು ಎಲ್ಲ ಕನ್ನಡಿಗರು ನೆನಪಿಟ್ಟುಕೊಳ್ಳಲೇ ಬೇಕಾದ ಅಪರೂಪದ ವ್ಯಕ್ತಿತ್ವ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಗಡಿನಾಡಿನಲ್ಲಿ ಕನ್ನಡಿಗರ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿದ ಲಲಿತಾ ಭಟ್ ಅವರು, ಕಾಸರಗೋಡಿನಲ್ಲಿ ಹೆರಿಗೆ ಮಾಡಿಸುವ ವೈದ್ಯೆಯರ ಕೊರತೆ ಇದ್ದ ಕಾಲದಲ್ಲಿ ಮಾತೃ ಹೃದಯದ ವೈದ್ಯೆಯಾಗಿಯೂ ಜನಪ್ರಿಯರಾಗಿದ್ದರು ಎಂದು ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ರಂಗಚಿನ್ನಾರಿ ಕಾಸರಗೋಡು ಇವರ ಸಹಕಾರದೊಂದಿಗೆ ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಮಂಗಳವಾರ ಸಂಜೆ ನಡೆದ ಕಸಾಪ ಗಡಿನಾಡ ಘಟಕದ ಮಾಜಿ ಅಧ್ಯಕ್ಷೆ, ಸಾಹಿತಿ ಡಾ.ಲಲಿತಾ ಎಸ್.ಎನ್.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡವನ್ನು ಕಟ್ಟಿದವರನ್ನು ನೆನಪಿಸುವ, ಅವರ ಕೆಲಸಗಳನ್ನು ಮುಂದಿನ ತಲೆಮಾರಿನ ಯುವ ಸಮುದಾಯಕ್ಕೆ ದಾಟಿಸುವ ಕೆಲಸ ನಡೆಯಬೇಕು. ಆದರೆ ಇಂತಹ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಸಂಸ್ಮರಣೆಗೆ ಪಾತ್ರರಾಗುವ ಸಾಧಕರ ಕುಟುಂಬ ಸದಸ್ಯರ ಪಾಲ್ಗೊಳ್ಳುವಿಕೆಯು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟ ಅವರು, ಹೆಚ್ಚಿನ ಸಂದರ್ಭಗಳಲ್ಲಿ ಕುಟುಂಬದವರ ಬೆಂಬಲ ನಮಗೆ ದೊರೆಯುತ್ತಿಲ್ಲ ಎಂದರು.
ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ಲಲಿತಾ ಎಸ್.ಎನ್ ಭಟ್ ಅವರ ಬದುಕು- ಬರಹ- ವ್ಯಕ್ತಿತ್ವದ ಕುರಿತು ನಾರಿ ಚಿನ್ನಾರಿ ಕಾಸರಗೋಡು ಅಧ್ಯಕ್ಷೆ ಸವಿತಾ ಟೀಚರ್, ಮಹಿಳೆ- ಅಟ್ಟುಂಬೆuಟಿಜeಜಿiಟಿeಜಳದಿಂದ (ಅಡುಗೆಮನೆ) ಅಂತರಿಕ್ಷದ ವರೆಗೆ ಎನ್ನುವ ವಿಷಯದ ಕುರಿತು ಖ್ಯಾತ ಲೇಖಕಿ ಡಾ.ಮಹೇಶ್ವರಿ. ಯು, ಕಾಸರಗೋಡಿನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಅನನ್ಯತೆ ಎಂಬವಿಷಯದ ಕುರಿತು ಶಿಕ್ಷಕಿ ಕವಿತಾ ಕೂಡ್ಲು ಅವರು ಉಪನ್ಯಾಸ ನೀಡಿದರು. ರಂಗ ಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ನ್ಯಾಯವಾದಿ ಥೋಮಸ್ ಡಿ'ಸೋಜ ,ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೆuಟಿಜeಜಿiಟಿeಜ. ಪಿ.ಎನ್ ಮೂಡಿತ್ತಾಯ, ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರ ನಾರಾಯಣ ಭಟ್, ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ಸಾಹಿತಿ ರಾಧಾಕೃಷ್ಣ. ಕೆ ಉಳಿಯತ್ತಡ್ಕ ,ಸಾಹಿತಿ ವಿಜಯಲಕ್ಷ್ಮಿ ಶಾನುಭೋಗ್, ಕನ್ನಡ ನೌಕರರ ಸಂಘದ ಮಾಜಿ ಅಧ್ಯಕ್ಷ ಜಯನಾರಾಯಣ ತಾಯನ್ನೂರು, ಉಪನ್ಯಾಸಕಿ ಲಕ್ಷ್ಮಿ,ಶಶಿಕಲಾ ಕಾಞಂಗಾಡು,ಕವಯತ್ರಿ ದಿವ್ಯಾಗಟ್ಟಿ ಪರಕ್ಕಿಲ,ಶರತ್ ಕೇಶವ, ಪುರುಷೋತ್ತಮ ಭಟ್,ಎಂ.ಸಂಜೀವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಪ್ರಾರ್ಥನೆ ಹಾಡಿದರು.
ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಸ್ವಾಗತಿಸಿದರು. ಕವಯಿತ್ರಿ ವಿದ್ಯಾವಾಣಿ ಮಠದಮೂಲೆ ವಂದಿಸಿದರು. ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿದರು.



