ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತರ ಸಭೆ ನಡೆಯಿತು. ಈ ಸಂದರ್ಭ ಮುಂದಿನ 2025-2026 ನೇ ವರ್ಷದ ಉತ್ಸವ ಆಚರಣಾ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮಿತ್ತೂರು ಪುರುಷೋತ್ತಮ ಭಟ್, ಕಾರ್ಯದರ್ಶಿಯಾಗಿ ಮಾಯಿಲೆ0ಗಿ ಲೋಕನಾಥ ಶೆಟ್ಟಿ, ಕೋಶಾಧಿಕಾರಿಯಾಗಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ, ಉಪಾಧ್ಯಕ್ಷರಾಗಿ ಜಯರಾಮ ರೈ ದ0ಬೆಕ್ಕಾನ ಹಾಗೂ ಜಯ ರೈ ಪಡ್ಡ0ಬೈಲು ಗುತ್ತು, ಜೊತೆ ಕಾರ್ಯದರ್ಶಿಯಾಗಿ ರಾಜಕುಮಾರ್ ಗುತ್ತು ಹಾಗೂ ರಘು ನೀರ್ಚಾಲು ಇತರರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ ಇತರ ಸಂಘಟನೆಯ ಪದಾಧಿಕಾರಿಗಳು, ಭಕ್ತರು ಸಲಹೆ ಸೂಚನೆಗಳನ್ನಿತ್ತರು. ಕಾರ್ಯದರ್ಶಿ ಲೋಕನಾಥ ಶೆಟ್ಟಿ ವಂದಿಸಿದರು.




.jpg)
