HEALTH TIPS

ಉತ್ತರ ಪ್ರದೇಶ: ರನ್‌ ವೇದಿಂದ ಜಾರಿದ ವಿಮಾನ

ಫರೂಖಾಬಾದ್‌: ಉತ್ತರ ಪ್ರದೇಶದ ಮೊಹಮ್ಮದಾಬಾದ್‌ನಲ್ಲಿ ಖಾಸಗಿ ವಿಮಾನವೊಂದು ಹಾರಾಟ ಆರಂಭಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ರನ್‌ವೇ ಪಕ್ಕದ ಪೊದೆಯತ್ತ ಜಾರಿದೆ. ಅದೃಷ್ಟವಶಾತ್‌ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಪೈಲಟ್‌ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, 'ಜೆಟ್‌ ಸರ್ವೀಸ್‌ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ವಿಟಿ-ಡಿಇಝಡ್ ವಿಮಾನವು ಬೆಳಿಗ್ಗೆ 10.30ಕ್ಕೆ ಹಾರಾಟ ಆರಂಭಿಸುವ ಸಮಯದಲ್ಲಿ ನಿಯಂತ್ರಣ ತಪ್ಪಿ, ರನ್‌ ವೇದಿಂದ ಜಾರಿ, ಪಕ್ಕದ ಪೊದೆಯತ್ತ ಉರುಳಿದೆ ಎಂದಿದ್ದಾರೆ.

ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬೀರ್‌ ಫ್ಯಾಕ್ಟರಿಯೊಂದರ ವ್ಯವಸ್ಥಾಪಕ ನಿರ್ದೇಶಕರು ನಿರ್ಮಾಣ ಕಾಮಗಾರಿ ಪರಿಶೀಲಿಸಲು ಈ ಜೆಟ್‌ನಲ್ಲಿ ಆಗಮಿಸಿದ್ದರು. ಅವರೂ ಸೇರಿದಂತೆ ಎಲ್ಲಾ ಪ್ರಯಾಣಿಕರು ಹಾಗೂ ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries