ಕಾಸರಗೋಡು: ನ್ಯಾಟೋ (ಎನ್‍ಎಟಿಒ) ಸಂಘಟನೆಯ 17 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಬ್ಬರು ಶಿಕ್ಷಕರಿಗೆ ಅಧ್ಯಾಪಕ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೊಲ್ಲೂರಿನಲ್ಲಿ ನಡೆದ ಸಮಾರಂಭದಲ್ಲಿ, ಕಾಸರಗೋಡು ಜಿಎಲ್‍ಪಿಎಸ್ ಕಂಬಾರ್‍ನ ಮುಖ್ಯೋಪಾಧ್ಯಾಯ ಅಮ್ಮು ಅಮ್ಮಂಗೋಡ್ ಮತ್ತು ತಿರುವನಂತಪುರದ ಖ್ಯಾತ ಪಿಟೀಲು ವಾದಕ ಆರ್.ಮಹಾದೇವನ್ ಅವರನ್ನು ಪ್ರಮಾಣಪತ್ರಗಳು ಮತ್ತು ಫಲಕಗಳೊಂದಿಗೆ ಸಮ್ಮಾನಿಸಲಾಯಿತು.
ನ್ಯಾಟೋ ಅಧ್ಯಕ್ಷ ಟಿ.ಕೆ.ನಾರಾಯಣನ್, ಪ್ರಧಾನ ಕಾರ್ಯದರ್ಶಿ ಮುಕುಂದನ್ ಪುಲಾರಿ, ರಕ್ಷಾಧಿಕಾರಿ ಕೃಷ್ಣನ್ ಮತ್ತು ಹಿರಿಯ ಶಿಕ್ಷಕ ಶ್ರೇಷ್ಠರಾದ ಪಾರ್ವತಿಪುರಂ ಪದ್ಮನಾಭ ಅಯ್ಯರ್, ಜೀಜಾ ಕೊಟ್ಟಾಯಂ, ಶ್ರೀನಿವಾಸ ಕಾಸರಗೋಡು ಮತ್ತು ಮೋಹನ್ ಶೆಣೈ ಎರ್ನಾಕುಳಂ ಮಾತನಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಮ್ಮು ಮಾಸ್ಟರ್ ಮತ್ತು ಮಹಾದೇವನ್ ಅಭಿನಂದನೆಗೆ ಸ್ಪಂದಿಸಿ ಮಾತನಾಡಿದರು. ಈ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಶಿಕ್ಷಕರಿಗೆ ನೀಡಲಾಗುತಿದ್ದು, ಅಮ್ಮು ಮಾಸ್ಟರ್ ಉತ್ತಮ ಗಾಯಕ ಹಾಗೂ ಕೀಬೋರ್ಡ್ ವಾದಕರು ಆಗಿದ್ದಾರೆ. ಸುಮಾರು ಮೂವತ್ತ ಮೂರು ವರ್ಷಗಳ ಸೇವೆಯ ನಂತರ, ಮುಂದಿನ ವರ್ಷ ನಿವೃತ್ತ್ತರಾಗಲಿದ್ದಾರೆ. ಸಮಾರಂಭದ ನಂತರ ನ್ಯಾಟೋ ಸದಸ್ಯರ ಸಂಗೀತ ಕಾರ್ಯಕ್ರಮದಲ್ಲಿ ಶ್ರೀನಿತ್ ತಬಲ, ರವಿಕಾಂತ್ ಮಾನ್ಯ ರಿಥಂ ಪ್ಯಾಡ್‍ನಲ್ಲಿ ಸಹಕರಿಸಿದರು.


