ಮಧೂರು: ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ವತಿಯಿಂದ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ 123ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು. ಗಾನ ವೈಭವ ಕಾರ್ಯಕ್ರಮವನ್ನು ಬಾಲಕೃಷ್ಣ ಆಚಾರ್ಯ ಪುತ್ತಿಗೆ, ದಿವಾಕರ ಕಾಸರಗೋಡು ನೆರವೇರಿಸಿದರು. ನೃತ್ಯ ವೈಭವದಲ್ಲಿ ಲಿಖಿತಾ ಭಂಡಾರಿ, ನಿಹಾರಿಕಾ ರೈ ಉಪ್ಪಿನಂಗಡಿ, ಗ್ರೀಷ್ಮ ಪುತ್ತೂರು, ಲೇಖನ್ ಗೌಡ, ತೀರ್ಥನ್, ಕೃತ್ವಿಕ್ ಮುಂತಾದವರು ಭಾಗವಹಿಸಿದ್ದರು. ಗಣ್ಯರಾದ ಜಗದೀಶ್ ಆಚಾರ್ಯ, ತಾರಾನಾಥ್ ಆಚಾರ್ಯ, ಪುಷ್ಪಾವತಿ, ಗೌರಿ,ಮನು ಕುಮಾರ್ ಪುತ್ತೂರು, ನಳಿನಿ ರೈ, ಶಿವನ ಗೌಡ,ಅಚ್ಯುತ್ ಭಟ್ ಉಪಸ್ಥಿತರಿದ್ದರು.
ಕಾಸರಗೋಡಿನ ಪಿಲಿಕುಂಜೆ ಶ್ರೀ ಜಗದಂಬಾ ದೇವೀ ಕ್ಷೇತ್ರದಲ್ಲಿ 122ನೇ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಮಧುಲತಾ, ಶ್ರದ್ದಾ, ಪೂಜಾಶ್ರೀ, ನವ್ಯಶ್ರೀ,ಅಹನಾ, ಸನುಷ,ಮೇಧಾ,ಯಶಿಕಾ, ಶಿವಪ್ರಿಯ, ರಶ್ಮಿತಾ, ಮನೀಶ್, ತನುಶ್ರೀ, ಗೌತಮಿ,ಖುಷಿ, ಜಿಯಾ ಮುಂತಾದವರು ಭಾಗವಹಿಸಿದ್ದರು. ಗಣ್ಯರಾದ ವೇಣುಗೋಪಾಲ್, ಸುಜಿತ್, ಸತೀಶ್ ಭಟ್, ಉಷಾ, ಅಚ್ಯುತ್ ಭಟ್ ಸಮ್ಮುಖದಲ್ಲಿ ವೇದಿಕೆಯಲ್ಲಿ ಭಾಗವಹಿಸಿದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ದೇವಸ್ಥಾನದ ವತಿಯಿಂದ ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ಶಾಲು ಹೊದೆಸಿ ದೇವರ ಪ್ರಸಾದದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.





