HEALTH TIPS

ಆರೆಸ್ಸೆಸ್ ಪ್ರಚಾರಕರಾಗಿ ಸೇರ್ಪಡೆಯಾಗಲಿರುವ ಮಾಜಿ ಡಿಜಿಪಿ ಜಾಕೋಬ್ ಥಾಮಸ್

ಕೊಚ್ಚಿ: ಕೇರಳ ಪೊಲೀಸ್‌ ನ ಮಾಜಿ ಮಹಾನಿರ್ದೇಶಕ (ಡಿಜಿಪಿ) ಜಾಕೋಬ್ ಥಾಮಸ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಕ್ರಿಶ್ಚಿಯನ್ ಸಮುದಾಯವನ್ನು ಆಕರ್ಷಿಸಲು ಆರೆಸ್ಸೆಸ್ ಮತ್ತು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳ ನಡುವೆಯೇ ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಕುರಿತು TNEI ನೊಂದಿಗೆ ಮಾತನಾಡಿದ ಜಾಕೋಬ್ ಥಾಮಸ್, ಅಕ್ಟೋಬರ್ 1ರಂದು ಎರ್ನಾಕುಲಂ ಜಿಲ್ಲೆಯ ಪಲ್ಲಿಕ್ಕರದಲ್ಲಿ ನಡೆಯುವ ಆರೆಸ್ಸೆಸ್ ಪಥಸಂಚಲನದಲ್ಲಿ ಅಧಿಕೃತ ಸಮವಸ್ತ್ರ ಗಣವೇಷ ಧರಿಸಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

"ನಾನು ದಶಕಗಳಿಂದ ಆರೆಸ್ಸೆಸ್ ನೊಂದಿಗೆ ಒಡನಾಟ ಹೊಂದಿದ್ದೇನೆ. ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಸಂಘಟನೆಯ ಹಿರಿಯ ನಾಯಕರೊಂದಿಗೆ ನನ್ನ ಸಂಪರ್ಕವಿದೆ. ರಾಷ್ಟ್ರಕ್ಕೆ ಶಿಸ್ತು, ನಿಸ್ವಾರ್ಥ ಸೇವೆ ಮತ್ತು ಕೇಡರ್‌ ಗಳ ತ್ಯಾಗವೇ ನನ್ನನ್ನು ಆರೆಸ್ಸೆಸ್ ನೆಡೆಗೆ ಆಕರ್ಷಿಸಿದೆ" ಎಂದು ಜಾಕೋಬ್ ಥಾಮಸ್ ಹೇಳಿದರು.

"ನಾನು ಭೇಟಿಯಾದ ಯಾವುದೇ ಆರೆಸ್ಸೆಸ್ ಕಾರ್ಯಕರ್ತರು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುವುದಿಲ್ಲ. ದೇಶಸೇವೆಗೆ ಇಷ್ಟೊಂದು ಸಮರ್ಪಣೆ ತೋರಿಸುವ ಸಂಘಟನೆ ಜಗತ್ತಿನಲ್ಲಿ ಮತ್ತೊಂದಿಲ್ಲ" ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಾಕೋಬ್ ಅಭಿಪ್ರಾಯಪಟ್ಟರು.

ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿಯೂ ತಾನು ಆರೆಸ್ಸೆಸ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದೆ ಎಂದು ಜಾಕೋಬ್ ಥಾಮಸ್ ಬಹಿರಂಗಪಡಿಸಿದರು.

"ಪ್ರಚಾರಕನಾಗಿ ಕೆಲಸ ಮಾಡುವ ನನ್ನ ಆಸಕ್ತಿಯನ್ನು ಸಂಘಟನೆಗೆ ತಿಳಿಸಿದ್ದೇನೆ. ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಆರೆಸ್ಸೆಸ್ ತೀರ್ಮಾನಿಸುತ್ತದೆ" ಎಂದು ಅವರು ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries