HEALTH TIPS

ಅಗಲ್ಪಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಲ್ಯಾಪ್ ಟಾಪ್ ಕೊಡುಗೆ

ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ 1999-2000 ವರ್ಷದ ಹಳೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಅನುಕೂಲತೆಗಾಗಿ ಲ್ಯಾಪ್‍ಟಾಪ್‍ನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ. ಈ ಯೋಜನೆಯ ರೂವಾರಿ ಹರ್ಷ ಕಜೆಮಲೆಯವರಾಗಿದ್ದು,ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಪರವಾಗಿ ಅಜಿತ್ ಶ್ರೀಗಣೇಶ್, ಅಕ್ಷತ್ ಕುಮಾರ್, ಪ್ರಭಾತ್ ಶರ್ಮ, ವಿಠಲ್ ರಾಜ್, ರವಿಪ್ರಕಾಶ್ ಮತ್ತು ಬಾಲಸುಬ್ರಮಣ್ಯ ಲ್ಯಾಪ್ ಟಾಪ್‍ನ್ನು ಶಾಲೆಗೆ ಹಸ್ತಾಂತರಿಸಿದರು.

ಸುಮಾರು 25 ವರ್ಷಗಳ ನಂತರ ಮತ್ತೆ ಈ ಮಾತೃಸಂಸ್ಥೆಯನ್ನು ನೆನಪಿಸಿ, ಇವತ್ತಿನ ತಂತ್ರಜ್ಞಾನ ಶಿಕ್ಷಣಕ್ಕೆ ಪೂರಕವಾಗುವಂತೆ ಅತ್ಯಂತ ಸೂಕ್ತವಾದ ಪರಿಕರಗಳನ್ನು ನೀಡಿ ತಂಡ ಸ್ತುತ್ಯರ್ಹವಾಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳ ಲಿಟಲ್ ಕೈಟ್ಸ್,  ತಂತ್ರಜ್ಞಾನ ಆಧಾರಿತ ಶಿಕ್ಷಣ ಹಾಗೂ ರೋಬೋಟಿಕ್ ಅಧ್ಯಯನಕ್ಕೆ ಅಗತ್ಯದ ಕೊಡುಗೆಯನ್ನು ಬಹಳ ಉದಾರತೆಯಿಂದ ಸಂದರ್ಭೋಚಿತವಾಗಿ ನೀಡಿರುತ್ತಾರೆ. ಶಾಲಾ ವ್ಯವಸ್ಥಾಪಕರು,ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು, ಅಧ್ಯಾಪಕ, ಅಧ್ಯಾಪಕೇತರ ವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಹಳೆ ವಿದ್ಯಾರ್ಥಿಗಳ ಈ  ಶ್ರೇಷ್ಠ ಕೊಡುಗೆಯನ್ನು ಬಹಳ ಗೌರವ ಹಾಗೂ ಧನ್ಯತಾ ಭಾವದಿಂದ ಸ್ವೀಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries