ಗೃಹ ಸಚಿವಾಲಯದ ಪ್ರಕಾರ, ವಿಶೇಷ ಕಾರ್ಯಾಚರಣೆ ವಿಭಾಗದಲ್ಲಿ 390 ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ದೆಹಲಿ ಪೊಲೀಸ್ ಡಿಸಿಪಿ ಪ್ರತೀಕ್ಷಾ ಗೋದಾರ, ಸಿಆರ್‌ಪಿಎಫ್ ಕಮಾಂಡೆಂಟ್ ದೇವೇಂದ್ರ ಸಿಂಗ್ ಕಥಾಯತ್, ಛತ್ತೀಸ್‌ಗಢ ಐಜಿ ಸುಂದರರಾಜ್ ಪಟ್ಟಿಲಿಂಗಂ, ಹಾಗೂ ಜಮ್ಮು-ಕಾಶ್ಮೀರ ಐಜಿ ವಿದ್ಯಾ ಕುಮಾರ್ ಬಿರ್ದಿ ಸೇರಿದ್ದಾರೆ.
ಛತ್ತೀಸ್‌ಗಢ ರಾಜ್ಯವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಲ್ಲಿನ 200 ಕ್ಕೂ ಹೆಚ್ಚು ಕಾನ್‌ಸ್ಟೆಬಲ್ ಮಟ್ಟದ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಶೌರ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನೀಡಿದ ಅಪಾರ ಕೊಡುಗೆಯ ಹಿನ್ನೆಲೆ 50 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ.




