ಮಂಜೇಶ್ವರ: ಸಿಪಿಐಎಂ ಸ್ಥಳೀಯ ಸಮಿತಿ ಕಚೇರಿಗಾಗಿ ದೈಗೋಳಿಯಲ್ಲಿ ನೂತನವಾಗಿ ನಿರ್ಮಿಸಿದ 'ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವನ್ನು ಸಿಪಿಎಂ ರಾಜ್ಯ ಸಮಿತಿ ಪ್ರಧಾನ ಕಾರ್ಯದÉುಂ.ವಿ ಗೋವಿಂದನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಸಿ.ಪಿ.ಐ.ಎಂ.ರಾಜ್ಯ ಕಾರ್ಯ ರಾಜ್ಯ ಸಮಿತಿ ಸದಸ್ಯ ಕೆ ಪಿ ಸತೀಶ್ ಚಂದ್ರನ್ ಧ್ವಜಾರೋಹಣ ನಡೆಸಿದರು. ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ, ಶಾಸಕ ಎಂ. ರಾಜಗೋಪಾಲನ್ ಕಟ್ಟಡ ಉದ್ಘಾಟಿಸಿದರು. ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಾಮ್ರೇಡ್ ವಿ ವಿ.ರಮೇಶನ್ ಅಧ್ಯಕ್ಷತೆ ವಹಿಸಿದರು. ಕೆ. ಪಕೀರ ಶೆಟ್ಟಿಗಾರ್ ಸ್ಮೃತಿ ಮಂಟಪವನ್ನು ಸಿ.ಪಿ.ಐ.ಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ,ಕಚೇರಿಗೆ ಒದಗಿಸಿದ ಪೀಠೋಪಕರಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಪಕ್ಷದ ಜಿಲ್ಲಾ ಕಮಿಟಿ ಸದಸ್ಯೆ ಬೇಬಿ ಬಾಲಕೃಷ್ಣನ್ ಹಾಗೂ ಧ್ವನಿ ವರ್ಧಕವನ್ನು ಕರ್ನಾಟಕ ಸಿ.ಪಿ.ಐ. ಎಂ ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಡಾ. ವಿ.ಪಿ .ಪಿ ಮುಸ್ತಫಾ ಮತ್ತು ಜಿಲ್ಲಾ ಕಮಿಟಿ ಸದಸ್ಯರಾದ ಜುಬೇರ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕೊಡ್ಲಮೊಗರು ಲೋಕಲ್ ಕಮಿಟಿ ಕಾರ್ಯದರ್ಶಿ ಮೋಹನ ಬಿ ಸ್ವಾಗತಿಸಿದರು. ಭಾರತಿ ಯಸ್ ಧನ್ಯವಾದವಿತ್ತರು. ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟ ವಿಸ್ಮಯ ವಿನಾಯಕ ಅವರಿಂದ ಹಾಸ್ಯ, ಮಿಮಿಕ್ರಿ ಕಾರ್ಯಕ್ರಮ ಮತ್ತು ವಿವಿಧ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ 25 ರಷ್ಟು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರಂತರ ಶ್ರಮದಾನ ಮಾಡಿದ ಸದಸ್ಯರನ್ನು ಅಭಿನಂದಿಸಲಾಯಿತು.


