ಕಾಸರಗೋಡು: ಮಸೀದಿಗಿರುವ ಹಣ ಸಂಗ್ರಹಕ್ಕಾಗಿ ಮನೆಗೆ ತಲುಪಿ, ಬಾಲಕಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದ ವ್ಯಕ್ತಿಯನ್ನು ಊರವರು ಸೆರೆಹಿಡಿದು ತಕ್ಕ ಶಾಸ್ತಿ ನೀಡಿದ ನಂತರ ಪೊಲೀಸರಿಗೊಪ್ಪಿಸಿದ್ದಾರೆ. ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಕ್ಕಾಡ್ ವೆಳ್ಳಚ್ಚೇರಿ ನಿವಾಸಿ ಖಾಲಿದ್ ಮುಸ್ಲಿಯಾರ್(59)ಬಂಧಿತ. ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದಕ್ಕೆ ಹಣಸಂಗ್ರಹಕ್ಕೆಂದು ತಿಳಿಸಿ ಆಗಮಿಸಿದ ಈತ, ಮನೆಯಲ್ಲಿ ಬೇರೆ ಯರೂ ಇಲ್ಲದಿರುವುದನ್ನು ಅರಿತು, ಏಕಾಂಗಿಯಾಗಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಬಿಗಿದಪ್ಪಿಕೊಂಡಿದ್ದಾನೆ. ಬಾಲಕಿ ಬೊಬ್ಬಿಡುತ್ತಿದ್ದಂತೆ ಆಸುಪಾಸಿನವರು ಆಗಮಿಸಿ, ಪರಾರಿಯಾಗಲೆತ್ನಿಸಿದ ಈತನನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮನೆಯವರು ನೀಡಿದ ದೂರಿನನ್ವಯ ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.

