ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆಯಲ್ಲಿ ದೀಪಾವಳಿಗೆ ವಿದ್ಯುತ್ ಅಲಂಕಾರಕ್ಕಾಗಿ ಮನೆಯಲ್ಲಿ ದೀಪ ಅಳವಡಿಸುವ ಮಧ್ಯೆ ವಿದ್ಯುತ್ ಶಾಕ್ ತಗುಲಿ ಯುವಕ ಸಾವನ್ನಪ್ಪಿದ್ದಾರೆ. ಇಲ್ಲಿನ ಆಚಾರಿಮೂಲೆ ನಿವಾಸಿ ನಾಗೇಶ್ ಆಚಾರ್ಯ ಎಂಬವರ ಪುತ್ರ, ರಾಜೇಶ್ ಆಚಾರ್ಯ(37)ಮೃತಪಟ್ಟ ಯುವಕ. ಸೋಮವಾರ ರಾತ್ರಿ ವಿದ್ಯುತ್ ದೀಪ ಅಳವಡಿಸುವ ಮಧ್ಯೆಶಾಕ್ ತಗುಲಿದ್ದ ಇವರನ್ನು ಗಂಭೀರಾವಸ್ಥೆಯಲ್ಲಿ ಕುಂಬಲೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕುಂಬಳೆ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.





