ಕಠ್ಮಂಡು: ಮೊದಲ ಬಾರಿಗೆ ಮೌಂಟ್ ಏವರೆಸ್ಟ್ ಏರಿ ದಾಖಲೆ ಬರೆದಿದ್ದ ತಂಡದ ಸದಸ್ಯರಾದ ಕಾಂಚಾ ಶೆರ್ಪಾ ಅವರು ಗುರುವಾರ ಮೃತಪಟ್ಟಿದ್ದಾರೆ ಎಂದು ನೇಪಾಳ ಪರ್ವತಾರೋಹಿಗಳ ಸಂಘ ತಿಳಿಸಿದೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಚಾ ಶೆರ್ಪಾ (92) ಅವರು, ನೇಪಾಳದ ಕಠ್ಮಂಡು ಜಿಲ್ಲೆಯ ಕಪನ್ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಘದ ಅಧ್ಯಕ್ಷ ಫುರ್ ಗೆಲ್ಜೆ ಶೆರ್ಪಾ ಅವರು ದೃಢಪಡಿಸಿದ್ದಾರೆ.

