HEALTH TIPS

ಅಯ್ಯೋ ಮೊಸರು ಹುಳಿಯಾಯ್ತು, ಉಳಿತು ಅಂತ ಎಸಿಬೇಡಿ..ಹೀಗೆಲ್ಲಾ ಬಳಕೆ ಮಾಡ್ಬೋದು

ಮೊಸರು ಹುಳಿ ಬಂದರೆ ಏನು ಮಾಡೋದು ಅನ್ನೋ ಚಿಂತೆನಾ?, ಡೋಂಟ್ ವರಿ..ಈ ಟಿಪ್ಸ್ ಪಾಲೋ ಮಾಡಿ. ಇದ್ರಿಂದ ನಿಮ್ಮ ಮನೆಯಲ್ಲಿರುವ ಮೊಸರು ವೇಸ್ಟ್ ಆಗಲ್ಲ. ಅಡುಗೇನೂ ರುಚಿಯಾಗಿರುತ್ತೆ.

ಕೆಲವೊಮ್ಮೆ ಯಾರೂ ತಿನ್ನದೆ ಮನೆಯಲ್ಲಿ ಹೆಚ್ಚು ಮೊಸರು ಉಳಿದಾಗ ನಾವದನ್ನು ಎತ್ತಿಡುತ್ತೇವೆ.

ಆದರೆ ಎಷ್ಟು ದಿನ ಹೀಗೆ ಇಡಲು ಸಾಧ್ಯ. ಅದು ಹುಳಿ ಬರುತ್ತದೆ. ಹಾಗೆಂದು ಅದನ್ನ ಎಸೆಯಲು ಆಗಲ್ಲ. ಇದು ಒಂದು ಕಥೆಯಾದರೆ, ಮತ್ತೆ ಕೆಲವೊಮ್ಮೆ ಮೊಸರು ಏಕಾಏಕಿ ಹುಳಿ ಬರುತ್ತದೆ. ಆಗ ಅದನ್ನ ತಿನ್ನಲೂ ಆಗದೆ ಎಸೆಯುವ ನಿರ್ಧಾರ ಮಾಡ್ತೇವೆ. ಆದರೆ ಮೊಸರು ಉಳಿದಾಗ ಅಥವಾ ಹುಳಿಯಾದಾಗ ಹೇಗೆಲ್ಲಾ ಉಪಯೋಗಕ್ಕೆ ಬರುತ್ತೆ ನೋಡೋಣ..

ಇಡ್ಲಿ ಹಿಟ್ಟನ್ನು ಮಿಶ್ರಣ ಮಾಡುವಾಗ ನೀರಿನ ಬದಲು, ನೀವು ಈ ಮೊಸರಿನಿಂದ ಮಾಡಿದ ಮಜ್ಜಿಗೆಯನ್ನು ಬಳಸಿ ಬೆರೆಸಬಹುದು. ಇಡ್ಲಿಗಳು ಚೆನ್ನಾಗಿ ಉಬ್ಬುತ್ತವೆ. ರುಚಿಯೂ ಚೆನ್ನಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ.

ತಾಜಾ ಮೊಸರಿನಿಂದ ಮಾಡಿದ ಮಜ್ಜಿಗೆಯ ಬದಲು, ಸ್ವಲ್ಪ ಹುಳಿಯಾಗಿರುವ ಮೊಸರಿನಿಂದ ಮಜ್ಜಿಗೆ ಮಾಡಲು ಪ್ರಯತ್ನಿಸಿ. ಇದು ತುಂಬಾ ರುಚಿಕರವಾಗಿರುತ್ತದೆ. ನೀವು ಇದಕ್ಕೆ ಸ್ವಲ್ಪ ಜೀರಿಗೆ ಪುಡಿ, ಪುದೀನಾ ಮತ್ತು ಈರುಳ್ಳಿ ಸೇರಿಸಿ ಕುಡಿದರೆ ಅದು ಅದ್ಭುತವಾಗಿರುತ್ತದೆ. ಇದು ಶೀತದಂತಹ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಇದನ್ನು ಚಳಿಗಾಲ ಅಥವಾ ಮಳೆಗಾಲ ಇರಲಿ ಯಾವುದೇ ಸಮಯದಲ್ಲಿ ಕುಡಿಯಬಹುದು.

ಹಣ್ಣಿನ ಜ್ಯೂಸ್ ಮತ್ತು ಸ್ಮೂಥಿಗಳನ್ನು ತಯಾರಿಸುವಾಗ ಹೇಗಿದ್ರೂ ಸ್ವಲ್ಪ ನೀರನ್ನು ಸೇರಿಸುತ್ತೇವೆ. ಬದಲಾಗಿ ಮೊಸರು ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ನಿಮಗೆ ಹುಳಿ ಗೊತ್ತಾಗಲ್ಲ. ಜೊತೆಗೆ ಆರೋಗ್ಯಕರವೂ ಆಗಿರುತ್ತದೆ. ಜೇನುತುಪ್ಪ ಸೇರಿಸುವುದರಿಂದ ರುಚಿ ಬ್ಯಾಲೆನ್ಸ್ ಆಗಿರುತ್ತದೆ. ಜೊತೆಗೆ ಇದು ಆರೋಗ್ಯಕರವೂ ಆಗಿರುತ್ತದೆ. ಆದ್ದರಿಂದ ನೀವು ಅದನ್ನು ಜ್ಯೂಸ್ ಮಾಡಿ ಕುಡಿಯಬಹುದು.

ಕೋಫ್ತಾ ಎಲ್ರೂ ಮನೆಯಲ್ಲು ಮಾಡಲ್ಲ. ಆದ್ರೆ ನೀವೇನಾದ್ರೂ ಯೂಟ್ಯೂಬ್ ಮತ್ತೊಂದು ನೋಡಿ ಮಾಡುವುದಾದರೆ ನೀವು ಇದರಲ್ಲಿ ಗ್ರೇವಿಗೆ ಮೊಸರನ್ನು ಬಳಸಬಹುದು. ಅಂದರೆ ಗ್ರೇವಿಗೆ ಮಸಾಲೆ ಮಾಡಿಕೊಳ್ಳುವಾಗ ಇದನ್ನು ಸೇರಿಸಿ ರುಬ್ಬಿ. ಒಳ್ಳೆಯ ಟೇಸ್ಟ್ ಬರುತ್ತೆ. ಮತ್ತೇಕೆ ತಡ, ಮುಂದಿನ ಬಾರಿ ಮೊಸರಿನೊಂದಿಗೆ ಗ್ರೇವಿ ಮಾಡಿ ತಿನ್ನಿ.

ಸಾಮಾನ್ಯವಾಗಿ ಈ ರೆಸಿಪಿ ಮಾಡುವಾಗ ಮೊಸರನ್ನ ಹುದುಗಿಸದ ಮೊಸರಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಆ ಮೊಸರಿಗೆ ಈ ಮೊಸರನ್ನು ಬಳಸಿ. ಇದರಲ್ಲಿರುವ ಹುಳಿ ವಡೆಗಳಿಗೆ ಅಂಟಿಕೊಳ್ಳುತ್ತದೆ. ತಿನ್ನೋವಾಗ ಪ್ರತಿ ತುತ್ತು ಬಾಯಿಯಲ್ಲಿ ನೀರೂರಿಸುತ್ತದೆ. ಇದನ್ನು ಪ್ರಯತ್ನಿಸದವರು ಒಮ್ಮೆ ಪ್ರಯತ್ನಿಸಿ ನೋಡಿ. ಆಗ ನೀವು ಮೊಸರನ್ನು ಮತ್ತೊಮ್ಮೆ ಹುಳಿ ಮಾಡಿ ಈ ರೆಸಿಪಿ ಟ್ರೈ ಮಾಡ್ತೀರಿ.

ಧೋಕ್ಲಾ ಕಡಲೆ ಹಿಟ್ಟಿನಿಂದ ತಯಾರಿಸುವ ಖಾದ್ಯ. ಇದನ್ನು ಮಾಡ್ವಾಗ ಹುಳಿ ಮೊಸರನ್ನು ಬಳಸಿ. ನೀವು ನಂಬುವುದಿಲ್ಲ, ರುಚಿ ಅದ್ಭುತವಾಗಿರುತ್ತದೆ. ಇದು ಸ್ವಲ್ಪ ಹುಳಿ ಮತ್ತು ಸಿಹಿಯಾಗಿರುವಾಗ ತುಂಬಾ ಒಳ್ಳೆಯದು.

ಮೊಸರನ್ನು ಒಣ ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಯೊಂದಿಗೆ ಬೆರೆಸಿ ಸೇವಿಸಿ. ಹುಳಿ ಬಂದ್ದದ್ದೂ ಗೊತ್ತಿಲ್ಲ. ರುಚಿ ಅದ್ಭುತವಾಗಿರುತ್ತದೆ.

  • ಈ ಮೊಸರನ್ನು ನಾನ್‌ ವೆಜ್ ಮಾಡುವಾಗ ಮಾಂಸದ ಜೊತೆ ಮ್ಯಾರಿನೇಟ್ ಮಾಡಲು ಬಳಸಬಹುದು.
  • ಮಜ್ಜಿಗೆ ಸೂಪ್ ಮಾಡಬಹುದು.
  • ರಾಯತ ಮಾಡಬಹುದು.
  • ಡಿಪ್ಸ್ ಮತ್ತು ಬೇಕಿಂಗ್ ಗೂ ಬಳಸಬಹುದು. ಇದಕ್ಕೆ ಸಕ್ಕರೆ ಮತ್ತು ಜೇನುತುಪ್ಪ ಸೇರಿಸುವುದರಿಂದ ಹುಳಿ ಸಮತೋಲನಗೊಳ್ಳುತ್ತದೆ ಮತ್ತು ರುಚಿ ಹೆಚ್ಚಾಗುತ್ತದೆ.

ಈ ಎಲ್ಲಾ ರೀತಿಯಲ್ಲಿ ನೀವು ಬಳಸುವ ಮೊಸರನ್ನು ಎಸೆಯಬೇಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries