ಗೋಯಲ್ ಅವರು ಯುರೋಪಿಯನ್ ಕಮಿಷನ್‌ನ ವಾಣಿಜ್ಯ ಮತ್ತು ಆರ್ಥಿಕ ಭದ್ರತಾ ಕಮಿಷನರ್ ಮಾರೋಸ್ ಸೆಫ್ಕೋವಿಕ್ ಅವರೊಂದಿಗೆ 26 ರಿಂದ 28 ಅಕ್ಟೋಬರ್‌ವರೆಗೆ ಚರ್ಚೆ ನಡೆಸಿದರು. ಎರಡೂ ಕಡೆಯವರು ಈ ವರ್ಷ ಅಂತ್ಯದೊಳಗೆ ಒಪ್ಪಂದ ತಲುಪುವ ಗುರಿಯನ್ನು ದೃಢಪಡಿಸಿದರು.
ಭಾರತವು ಒಪ್ಪಂದವು ಸಮತೋಲಿತ, ಸಮಾನ ಹಾಗೂ ಪಾರದರ್ಶಕವಾಗಿರಬೇಕು ಎಂದು ಒತ್ತಿಹೇಳಿದ್ದು, ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಸಮನ್ವಯಗೊಳಿಸುವ ಅಗತ್ಯವಿದೆ ಎಂದು ತಿಳಿಸಿದೆ. ಕಾರ್ಮಿಕ-ತೀವ್ರ ವಲಯಗಳಿಗೆ ವಿಶೇಷ ಸಡಿಲಿಕೆ ನೀಡಬೇಕೆಂದು ಗೋಯಲ್ ಒತ್ತಾಯ ಮಾಡಿದರು.
ಉಕ್ಕು, ಆಟೋ, ಹಾಗೂ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ ಕುರಿತಾಗಿ ಮುಂದಿನ ವಾರ ತಾಂತ್ರಿಕ ಮಟ್ಟದ ಚರ್ಚೆಗಳು ನಿಗದಿಯಾಗಿದೆ. ಒಪ್ಪಂದದ ಮೂಲಕ ಭಾರತ-ಇಯು ಆರ್ಥಿಕ ಸಹಕಾರಕ್ಕೆ ಹೊಸ ಬಲ ಸಿಗುವ ನಿರೀಕ್ಷೆಯಿದೆ.




